ಸೋಮವಾರ, ನವೆಂಬರ್ 30, 2020
20 °C

ಕೋವಿಡ್–19: ಅಮೆರಿಕದಲ್ಲಿ ದಿನವೊಂದರ ಸಾವಿನ ಸಂಖ್ಯೆಯಲ್ಲಿ ಭಾರಿ ಏರಿಕೆ

ಎಪಿ Updated:

ಅಕ್ಷರ ಗಾತ್ರ : | |

Covid-19

ವಾಷಿಂಗ್ಟನ್: ಅಮೆರಿಕದಾದ್ಯಂತ ಕೊರೊನಾ ವೈರಸ್ ಸಾಂಕ್ರಾಮಿಕದ ಹರಡುವಿಕೆ ಮತ್ತೆ ಹೆಚ್ಚುತ್ತಿದ್ದು, ದಿನವೊಂದರ ಸರಾಸರಿ ಮರಣ 1,300ಕ್ಕೆ ಏರಿಕೆಯಾಗಿದೆ. ನ್ಯೂಯಾರ್ಕ್‌ ನಗರ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಪ್ರತಿ ದಿನದ ಸಾವಿನ ಸಂಖ್ಯೆ ಮೇ ತಿಂಗಳ ಬಳಿಕ ಗರಿಷ್ಠ ಮಟ್ಟ ತಲುಪಿದೆ. 

ಅಮೆರಿಕದಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ ಸದ್ಯ ಸುಮಾರು 2,53,000 ತಲುಪಿದ್ದು, ವಿಶ್ವದಲ್ಲೇ ಅತಿ ಹೆಚ್ಚಿನದ್ದಾಗಿದೆ. ಈವರೆಗೆ 1.17 ಕೋಟಿಗೂ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ. ಗುರುವಾರ ದಿನವೊಂದರ ಅತಿಹೆಚ್ಚು, ಅಂದರೆ ಸುಮಾರು 1.8 ಲಕ್ಷದಷ್ಟು ಮಂದಿಗೆ ಸೋಂಕು ತಗಲಿರುವುದು ದೃಢಪಟ್ಟಿತ್ತು. ಕೊರೊನಾಪೀಡಿತರಾಗಿ ಆಸ್ಪತ್ರೆಗೆ ದಾಖಲಾಗಿರುವವರ ಸಂಖ್ಯೆಯೂ ಗರಿಷ್ಠಮಟ್ಟ ತಲುಪಿದೆ. ಸದ್ಯ 80,000 ಸೋಂಕಿತರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: 

ಮುಂದಿನ ವಾರದಿಂದ ರಜಾ ದಿನಗಳು ಮತ್ತು ‘ಥ್ಯಾಂಕ್ಸ್‌ಗಿವಿಂಗ್’ ಕೂಟಗಳಲ್ಲಿ ಜನ ಗುಂಪುಸೇರುವುದರಿಂದ ಸೋಂಕು ಹರಡುವಿಕೆ ಮತ್ತಷ್ಟು ತೀವ್ರಗೊಳ್ಳಬಹುದೆಂದು ಆರೋಗ್ಯ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಅನೇಕ ರಾಜ್ಯಗಳು ಮತ್ತು ನಗರಗಳು ಈಗಾಗಲೇ ಲಾಕ್‌ಡೌನ್‌ ಮತ್ತು ಇತರ ನಿರ್ಬಂಧಗಳನ್ನು ವಿಧಿಸುತ್ತಿವೆ. ಕ್ಯಾಲಿಫೊರ್ನಿಯಾದಲ್ಲಿ ರಾತ್ರಿ 10ರಿಂದ ಬೆಳಿಗ್ಗೆ 5ರ ವರೆಗೆ ಕರ್ಫ್ಯೂ ವಿಧಿಸಲಾಗಿದೆ.

ಟೆಕ್ಸಾಸ್‌ ಬಾರ್ಡರ್ ಕೌಂಟಿಯಲ್ಲಿ ಅಕ್ಟೋಬರ್‌ನಿಂದೀಚೆಗೆ 300ಕ್ಕೂ ಹೆಚ್ಚು ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಈಶಾನ್ಯ ಅಮೆರಿಕದಲ್ಲಿ ಬಿಕ್ಕಟ್ಟು ತೀವ್ರಗೊಂಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು