ಜೆರುಸಲೆಂ (ಎ.ಪಿ): ಇಸ್ರೇಲ್ನಲ್ಲಿ ಮತಎಣಿಕೆ ಪ್ರಕ್ರಿಯೆ ಗುರುವಾರ ಪುನರಾರಂಭಗೊಂಡಿದೆ. ಆದರೆ, ಪ್ರಧಾನಿ ಬೆಂಜಮಿನ್ ನೆತನ್ಯಾಹುಅಥವಾ ಅವರ ವಿರೋಧಿ ಬಣಕ್ಕೆ ಸ್ಪಷ್ಟ ಮುನ್ನಡೆ ಸಿಗದೆ ಅನಿಶ್ಚಿತತೆ ಮುಂದುವರಿದಿದೆ.

ಮಂಗಳವಾರ ಇಸ್ರೇಲ್ ಸಂಸತ್ತಿಗೆ ಚುನಾವಣೆ ನಡೆದಿತ್ತು. ಇದು, ಕಳೆದ ಎರಡು ವರ್ಷಗಳಲ್ಲಿನ ನಡೆದಿರುವ ನಾಲ್ಕನೇ ಚುನಾವಣೆಯಾಗಿದೆ. ಇದು, ನೆತನ್ಯಾಹು ಅವರು ಸರ್ಕಾರ ಮುನ್ನಡೆಸಲು ಅರ್ಹರು ಎಂಬುದನ್ನು ಖಾತರಿಪಡಿಸುವ ಜನಮತಗಣನೆ ಎಂದೇ ಭಾವಿಸಲಾಗಿದೆ.

ಸಂಸತ್ತಿನ ಒಟ್ಟು ಸದಸ್ಯ ಬಲ 120 ಆಗಿದ್ದು, ಸರ್ಕಾರ ರಚನೆಗೆ ಸರಳ ಬಹುಮತ 61 ಸ್ಥಾನಗಳು ಅಗತ್ಯ. ಇದರ ಸನಿಹಕ್ಕೆ ನೆತನ್ಯಾಹು ಪರ ಅಥವಾ ವಿರೋಧಿ ಬಣ ಇನ್ನೂ ತಲುಪಿಲ್ಲ. ಮತಎಣಿಕೆಯು ಶೇ 93ರಷ್ಟು ಮುಗಿದಿದೆ. ನೆತನ್ಯಾಹು ಬಣ 52 ಕ್ಷೇತ್ರಗಳಲ್ಲಿ, ವಿರೋಧಿ ಬಣ 57 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ. ಯೆಮಿನಾ ಪಕ್ಷ ಏಳು ಸ್ಥಾನಗಳು ಹಾಗೂ ಅರಬ್ ಇಸ್ಲಾಮಿಸ್ಟ್ ಪಾರ್ಟಿ 4 ಸ್ಥಾನ ಗೆದ್ದಿದ್ದು, ನಿರ್ಣಾಯಕ ಪಾತ್ರ ವಹಿಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.