ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ ಚುನಾವಣೆ: 14 ಭಾರತೀಯ ಭಾಷೆಗಳಲ್ಲಿ ಡಿಜಿಟಲ್ ಜಾಹಿರಾತು

ದಕ್ಷಿಣ ಏಷ್ಯಾ ರಾಷ್ಟ್ರಗಳ ನಾಗರಿಕರನ್ನು ಸೆಳೆಯಲು ಡೆಮಾಕ್ರಟಿಕ್ ಪಕ್ಷದ ತಂತ್ರ
Last Updated 22 ಸೆಪ್ಟೆಂಬರ್ 2020, 7:15 IST
ಅಕ್ಷರ ಗಾತ್ರ

ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅಮೆರಿಕದಲ್ಲಿರುವ ದಕ್ಷಿಣ ಏಷ್ಯಾ ರಾಷ್ಟ್ರಗಳ ಮತದಾರರನ್ನು ಸೆಳೆಯಲು ಡೆಮಾಕ್ರಟಿಕ್ ಪಕ್ಷ 14 ಭಾರತೀಯ ಭಾಷೆಗಳಲ್ಲಿ ಡಿಜಿಟಲ್‌ ಜಾಹಿರಾತು ಪ್ರಚಾರ ಪರಿಕರಗಳನ್ನು ಬಿಡುಗಡೆ ಮಾಡಿದೆ.

ಡಿಜಿಟಲ್‌ ಚುನಾವಣಾ ಪ್ರಚಾರದ ಭಾಗವಾಗಿ ಸಿದ್ಧವಾಗಿರುವ’ಚಲೊ ಚಲೊ ಬೈಡನ್ ಕೊ ವೋಟ್‌ ದೊ (ಬನ್ನಿ ಬನ್ನಿ ಬೈಡನ್‌ಗೆ ಮತ ಹಾಕಿ) ಎಂಬ ಸಂಗೀತ ಸಹಿತವಿರುವ ವಿಡಿಯೊವೊಂದು ಈಗಾಗಲೇ ಅಮೆರಿಕದಲ್ಲಿನ ಭಾರತೀಯ ಸಮುದಾಯದಲ್ಲಿ ವೈರಲ್ ಆಗಿದೆ.

ಗ್ರಾಫಿಕ್ಸ್‌ನೊಂದಿಗೆ ’ಜಾಗೊ ಅಮೆರಿಕ, ಜಾಗೊ, ಬೂಲ್‌ನಾ ಜಾನಾ ಬೈಡೆನ್ – ಕಮಲಾ ಕೊ ವೋಟ್ ದೇನಾ (ಎಚ್ಚರಗೊಳ್ಳಿ ಅಮೆರಿಕ, ಬೈಡನ್‌ - ಕಮಲಾ ಜೋಡಿಗೆ ಮತ ಚಲಾಯಿಸುವುದನ್ನು ಮರೆಯಬೇಡಿ) ಎಂಬ ಜಾಹಿರಾತನ್ನು ಸಿದ್ಧಪಡಿಸಲಾಗಿದೆ’ ಎಂದು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೊ ಬೈಡನ್ ಅವರ ಚುನಾವಣಾ ಪ್ರಚಾರದ ರಾಷ್ಟ್ರೀಯ ಆರ್ಥಿಕ ಸಮಿತಿ ಸದಸ್ಯ ಅಜಯ್ ಜೈನ್ ಭುಟೊರಿಯಾ ಹೇಳಿದ್ದಾರೆ.

’ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ನಮ್ಮ ಪಕ್ಷದ ಭಾಗಿದಾರರನ್ನು ತಲುಪುವ ಪ್ರಯತ್ನ ಮಾಡುತ್ತಿದ್ದೇವೆ. ಹಾಗೆಯೇ, ದಕ್ಷಿಣ ಏಷ್ಯಾ ರಾಷ್ಟ್ರಗಳ ಮತದಾರರಿಗೆ, ಮತಗಟ್ಟೆಯಲ್ಲಿ ನೋಂದಣಿ ಮಾಡಿಕೊಳ್ಳುವುದು, ಮತದಾನ ಮಾಡುವ ವಿಧಾನ, ಅಂಚೆ ಮೂಲಕ ಮತದಾನ ಮಾಡುವುದು ಹಾಗೂ ಬೈಡನ್ – ಕಮಲಾ ಜೋಡಿಗೆ ಮತ ಹಾಕುವಂತಹ ವಿಚಾರಗಳ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ’ ಎಂದು ಅಜಯ್‌ ತಿಳಿಸಿದ್ದಾರೆ.’ಜನರು ಯಾವತ್ತಿಗೂ ಆಹಾರ, ಸಂಗೀತ, ಭಾಷೆ ಮತ್ತು ಸಂಸ್ಕೃತಿಯ ಮೂಲಕ ಖಂಡಿತಾ ಸಂಪರ್ಕಕ್ಕೆ ಸಿಗುತ್ತಾರೆ’ ಎಂದು ಅವರು‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT