ಡಿಎಫ್‌ಸಿ ಉಸ್ತುವಾರಿ ಮುಖ್ಯಸ್ಥರಾಗಿ ಭಾರತ ಮೂಲದ ದೇವ್ ಜಗದೇಶನ್

ವಾಷಿಂಗ್ಟನ್: ಅಂತರರಾಷ್ಟ್ರೀಯ ಅಭಿವೃದ್ಧಿ ಹಣಕಾಸು ನಿಗಮದ (ಡಿ.ಎಫ್.ಸಿ) ಉಸ್ತುವಾರಿ ಮುಖ್ಯಸ್ಥರಾಗಿ ಭಾರತೀಯ ಮೂಲದ ಅಮೆರಿಕನ್ನರಾದ ದೇವ್ ಜಗದೇಶನ್ ಅವರನ್ನು ಅಧ್ಯಕ್ಷ ಜೋ ಬೈಡನ್ ನೇಮಕ ಮಾಡಿದ್ದಾರೆ.
ಸಾರ್ವಜನಿಕ ಸೇವೆಯಲ್ಲಿ ಇರುವ ಇವರು ಯಾವುದೇ ಸರ್ಕಾರವಿರಲಿ, ಅಮೆರಿಕ ಜನರ ಸೇವೆಗೆ ಬದ್ಧರಾಗಿದ್ದಾರೆ. ಅವರಿಗೆ ರಾಜಕೀಯ ಪಕ್ಷ, ತಮ್ಮದೇ ಅಜೆಂಡಾ ಇಲ್ಲ ಅವರ ಅನುಭವ ಮತ್ತು ಬದ್ಧತೆಯನ್ನು ಸರ್ಕಾರ ಬಳಸಿಕೊಳ್ಳಲಿದೆ ಎಂದು ಬೈಡನ್ ಹೇಳಿದ್ದಾರೆ.
ಜಗದೇಶನ್ ಅವರು ಕ್ಯಾಥೊಲಿಕ್ ಯೂನಿವರ್ಸಿಟಿಯಲ್ಲಿ ಬಿ.ಎ ಮತ್ತು ಕೊಲಂಬಸ್ ಸ್ಕೂಲ್ ಆಫ್ ಲಾದಲ್ಲಿ ಜೆ.ಡಿ ಪದವಿ ಪೂರೈಸಿದ್ದು, ಇದಕ್ಕೂ ಮೊದಲು ಡಿಎಫ್‌ಸಿಯ ಡೆಪ್ಯೂಟಟಿ ಜನರಲ್ ಕೌನ್ಸಲ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಇದನ್ನೂ ಓದಿ: ಬ್ರಿಟನ್ ಪ್ರಧಾನಿ, ಮೆಕ್ಸಿಕೊ ಅಧ್ಯಕ್ಷರ ಜೊತೆಗೆ ಬೈಡನ್ ಚರ್ಚೆ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.