ಮಂಗಳವಾರ, ಮಾರ್ಚ್ 2, 2021
23 °C

‘ಬೇರೆ ರೀತಿ’ಯಲ್ಲಿ ಮತ್ತೆ ಬರಲಿದ್ದೇನೆ: ಡೊನಾಲ್ಡ್ ಟ್ರಂಪ್

ಎಎಫ್‌ಪಿ Updated:

ಅಕ್ಷರ ಗಾತ್ರ : | |

Donald trump

ವಾಷಿಂಗ್ಟನ್: ಮುಂದೊಂದು ದಿನ ‘ಬೇರೆ ರೀತಿ’ಯಲ್ಲಿ ಮತ್ತೆ ಬರಲಿದ್ದೇನೆ ಎಂದು ಅಮೆರಿಕದ ನಿರ್ಗಮಿಸುತ್ತಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

‘ನಾಲ್ಕು ವರ್ಷಗಳು ಅತ್ಯದ್ಭುತವಾಗಿದ್ದವು’ ಎಂದು ಫ್ಲೊರಿಡಾಕ್ಕೆ ತೆರಳಲು ವಿಮಾನವೇರುವ ಮುನ್ನ ವಾಷಿಂಗ್ಟನ್‌ನ ಹೊರವಲಯದಲ್ಲಿ ಉದ್ಯೋಗಿಗಳು, ಬೆಂಬಲಿಗರು ಹಾಗೂ ಕುಟುಂಬದವರನ್ನು ಉದ್ದೇಶಿಸಿ ಅವರು ಹೇಳಿದ್ದಾರೆ.

‘ನಾವು ಜತೆಯಾಗಿ ಸಾಧಿಸಿದ್ದೇವೆ. ನಾನು ಯಾವಾಗಲೂ ನಿಮಗಾಗಿ ಹೋರಾಡುತ್ತೇನೆ. ಬೇರೆ ರೀತಿಯಲ್ಲಿ ಶೀಘ್ರದಲ್ಲೇ ಮರಳಲಿದ್ದೇನೆ’ ಎಂದು ಅವರು ಹೇಳಿದ್ದಾರೆ.

ಬೈಡನ್ ಹೆಸರು ಪ್ರಸ್ತಾಪಿಸದ ಅವರು, ಹೊಸ ಆಡಳಿತಕ್ಕೆ ಯಶಸ್ಸು ದೊರೆಯಲಿ ಎಂದು ಹಾರೈಸಿದ್ದಾರೆ.

ಬೈಡನ್ ಪದಗ್ರಹಣ ಸಮಾರಂಭದ ವೇಳೆ ಟ್ರಂಪ್ ಫ್ಲೊರಿಡಾದ ಮಾರ್-ಎ-ಲಾಗೊ ರೆಸಾರ್ಟ್‌ನಲ್ಲಿ ಇರಲಿದ್ದಾರೆ ಎನ್ನಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು