ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆಯಿಂದ ಟ್ರಂಪ್‌ ಬಿಡುಗಡೆ: ಮಾಸ್ಕ್‌ ತೆಗೆದು ಶ್ವೇತಭವನ ಪ್ರವೇಶ

Last Updated 13 ಅಕ್ಟೋಬರ್ 2020, 1:22 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಕೊರೊನಾ ವೈರಸ್‌ ಸೋಂಕಿಗೆ ಒಳಗಾಗಿ ಕಳೆದ ನಾಲ್ಕು ದಿನಗಳಿಂದ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಯಾದರು. ಶ್ವೇತ ಭವನ ಪ್ರವೇಶಿಸಿದ ಕೂಡಲೇ ಮಾಸ್ಕ್‌ ತೆಗೆದ ಅವರು, ಶೀಘ್ರವೇ ಪ್ರಚಾರಕ್ಕೆ ಮರಳುವುದಾಗಿ ಘೋಷಿಸಿದರು.

ಬೆಥೆಸ್ಡಾದಲ್ಲಿ ವಾಲ್ಟರ್ ರೀಡ್ ರಾಷ್ಟ್ರೀಯ ಮಿಲಿಟರಿ ವೈದ್ಯಕೀಯ ಕೇಂದ್ರದಿಂದ ಹೊರಡುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌

ಇದಕ್ಕೂ ಮೊದಲು ಟ್ವೀಟ್‌ ಮಾಡಿರುವ ಟ್ರಂಪ್‌, ‘ಅಮೆರಿಕನ್ನರು ಭಯಪಡಬೇಕಿಲ್ಲ,’ ಎಂದು ಹೇಳಿದರು. ಆದರೆ, ಈ ವರೆಗೆ ಅಮೆರಿಕದಲ್ಲಿ 2,10,000 ಮಂದಿ ಕೊರೊನಾ ವೈರಸ್‌ಗೆ ಪ್ರಾಣ ತೆತ್ತಿದ್ದಾರೆ.

ಶ್ವೇತಭವನಕ್ಕೆ ಮರಳುವಾಗ ದೈಹಿಕವಾಗಿ ಸದೃಢರಾಗಿರುವಂತೆ ತೋರಿಸಿಕೊಳ್ಳುವ ಪ್ರಯತ್ನ ನಡೆಸಿದ ಟ್ರಂಪ್‌ ಈ ಮಧ್ಯೆ ಸರಣಿ ಟ್ವೀಟ್‌ಗಳನ್ನು ಮಾಡಿದ್ದರು. ಅವುಗಳಲ್ಲಿ ರಾಜಕೀಯವೇ ಪ್ರಧಾನವಾಗಿತ್ತು. ಶೀಘ್ರವೇ ಪ್ರಚಾರಕ್ಕೆ ಮರಳುವುದಾಗಿ ಒಂದು ಟ್ವೀಟ್‌ನಲ್ಲಿ ಹೇಳಿದ ಅವರು, ಕೋವಿಡ್‌ಗೆ ಯಾರೂ ಭಯಪಡಬೇಡಿ ಎಂದು ಮತ್ತೊಂದು ಟ್ವೀಟ್‌ನಲ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT