ಜಿ 20 ಅಧ್ಯಕ್ಷತೆ ವೇಳೆ ಭಾರತದ ಗುರಿಗಳ ಬಗ್ಗೆ ಚರ್ಚೆ
ಜಿ 20 ಅಧ್ಯಕ್ಷತೆ | ಜೈಶಂಕರ್ – ಶಾಬಾ ಕೊರೊಶಿ ಭೇಟಿ

ವಿಶ್ವಸಂಸ್ಥೆ: ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ವಿಶ್ವಸಂಸ್ಥೆಯ ಸಾಮಾನ್ಯಸಭೆ 77ನೇ ಅಧಿವೇಶನದ ಅಧ್ಯಕ್ಷ ಶಾಬಾ ಕೊರೊಶಿ ಅವರನ್ನು ಭೇಟಿಯಾಗಿ, ಜಿ20 ಅಧ್ಯಕ್ಷತೆ ಕುರಿತು ಭಾರತದ ಗುರಿ ಮತ್ತು ಉದ್ದೇಶಗಳನ್ನು ಕುರಿತು ಚರ್ಚಿಸಿದರು.
ಭದ್ರತಾ ಮಂಡಳಿಯು ಆಯೋಜಿಸಿರುವ ಎರಡು ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಜೈಶಂಕರ್ ಮಂಗಳವಾರ ಆಗಮಿಸಿದ್ದಾರೆ.
ಭದ್ರತಾ ಮಂಡಳಿಯ ಅಧಿಕಾರಾವಧಿ ನೆನಪಿಗೆ ಭಾರತವು ವಿಶ್ವಸಂಸ್ಥೆಗೆ ಕೊಡುಗೆಯಾಗಿ ನೀಡಿರುವ ಮಹಾತ್ಮ ಗಾಂಧಿ ಅವರ ಪುತ್ಥಳಿಯನ್ನು ಜೈಶಂಕರ್ ಅನಾವರಣಗೊಳಿಸುವರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.