ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಕ್ಸಿಕೊ ಸಮೀಪ 7.1ರಷ್ಟು ತೀವ್ರತೆಯ ಭೂಕಂಪ: ವ್ಯಕ್ತಿ ಸಾವು

Last Updated 8 ಸೆಪ್ಟೆಂಬರ್ 2021, 5:50 IST
ಅಕ್ಷರ ಗಾತ್ರ

ಅಕಾಪುಲ್ಕೊ(ಮೆಕ್ಸಿಕೊ): ಮೆಕ್ಸಿಕೊದ ಗೆರೆರೊ ರಾಜ್ಯದ ಅಕಾಪುಲ್ಕೊ ಸಮೀಪದಲ್ಲಿರುವ ಪೆಸಿಫಿಕ್‌ ರೆಸಾರ್ಟ್‌ ನಗರದಲ್ಲಿ ಮಂಗಳವಾರ ಭಾರಿ ತೀವ್ರತೆಯ ಭೂಕಂಪ ಸಂಭವಿಸಿದ್ದು, ಒಬ್ಬರು ಮೃತಪಟ್ಟಿದ್ದಾರೆ.

ರಿಕ್ಟರ್‌ ಮಾಪಕದಲ್ಲಿ ಭೂಕಂಪದ ತೀವ್ರತೆ 7.1ರಷ್ಟು ದಾಖಲಾಗಿದೆ. ಕಂಪನದ ತೀವ್ರತೆಗೆ ನೂರು ಕಿ.ಮೀ ವ್ಯಾಪ್ತಿಯಲ್ಲಿರುವ ಕಟ್ಟಡಗಳು ಅಲುಗಾಡಿವೆ.

ಭೂಕಂಪದ ಕೇಂದ್ರ ಗೆರೆರೊ ರಾಜ್ಯದ ಅಕಾಪುಲ್ಕೊದಿಂದ 11 ಕಿಲೋಮೀಟರ್ ಆಗ್ನೇಯದಲ್ಲಿದೆ ಎಂದು ರಾಷ್ಟ್ರೀಯ ಭೂಕಂಪನ ಕೇಂದ್ರ ವರದಿ ಮಾಡಿದೆ.

ಭೂಮಿ ಕಂಪಿಸಿದಾಗ ಅಕಾಪುಲ್ಕೊ ಸಮೀಪದ ಕೊಯುಕಾ ಡಿ ಬೆನಿಟೆಜ್‌ ನಗರದಲ್ಲಿ ಯುಟಿಲಿಟಿ ಪೋಲ್‌ ಬಿದ್ದು ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ ಎಂದು ಗೆರೆರೊ ರಾಜ್ಯದ ರಾಜ್ಯಪಾಲ ಹೆಕ್ಟರ್ ಸ್ಥಳೀಯ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ. ಹಲವು ವಾಹನಗಳ ಮೇಲೆ ಯುಟಿಲಿಟಿ ಪೋಲ್‌ಗಳು ಬಿದ್ದಿವೆ. ಚರ್ಚ್‌ನ ಮುಂಭಾಗವೂ ಕುಸಿದಿದೆ. ಭೂಮಿಯು ಕಂಪಿಸಿದ ನಂತರ, ಹೋಟೆಲ್‌ಗಳಲ್ಲಿದ್ದ ಪ್ರವಾಸಿಗರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.

ಮೆಕ್ಸಿಕೊ ಅಧ್ಯಕ್ಷ ಆಂಡ್ರೆಸ್‌ ಮ್ಯಾನುಯೆಲ್‌ ಲೋಪೆಸ್‌ ಬ್ರಾಡೊರ್‌, ‘ಭೂಕಂಪದಿಂದ ದೊಡ್ಡ ಪ್ರಮಾಣದ ಅನಾಹುತಗಳು ಸಂಭವಿಸಿರುವುದು ವರದಿಯಾಗಿಲ್ಲ‘ ಎಂದು ವಿಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT