ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡೊನೇಷ್ಯಾ: 6.9 ತೀವ್ರತೆಯ ಭೂಕಂಪ

Last Updated 19 ಆಗಸ್ಟ್ 2020, 1:13 IST
ಅಕ್ಷರ ಗಾತ್ರ

ಜಕಾರ್ತ: ಇಂಡೊನೇಷ್ಯಾದ ರಾಜಧಾನಿ ಜಕಾರ್ತದ ಸಮೀಪ ಬುಧವಾರ ಬೆಳಗ್ಗೆ ಭೂಕಂಪ ಉಂಟಾಗಿದ್ದು, ರಿಕ್ಟರ್‌ ಮಾಪಕದಲ್ಲಿ 6.9 ತೀವ್ರತೆ ದಾಖಲಾಗಿದೆ.

ಆದರೆ ತಕ್ಷಣಕ್ಕೆ ಯಾವುದೇ ಹಾನಿ ಸಂಭವಿಸಿದ ವರದಿಯಾಗಿಲ್ಲ ಎಂದು ಅಮೆರಿಕದ ವಿಜ್ಞಾನ ಸಂಸ್ಥೆ ತಿಳಿಸಿದೆ. ಬೆಳಗ್ಗೆ 3. 45ರ ಸುಮಾರಿಗೆಭೂಕಂಪ ಸಂಭವಿಸಿರುವುದನ್ನು ಭಾರತೀಯ ಭೂಕಂಪನ ಶಾಸ್ತ್ರ ಹಾಗೂ ಹವಾಮಾನ ಇಲಾಖೆಯು ಖಚಿತಪಡಿಸಿದೆ.

ಜಕಾರ್ತದಿಂದ 633 ಕಿ.ಮೀ ದೂರದದಲ್ಲಿನ ವಾಯವ್ಯ ಭಾಗದಲ್ಲಿ ಕಂಪನವಾಗಿದೆ.ಭೂಮಿಯ ಮೇಲ್ಮೈನಿಂದ 40 ಕಿ.ಮೀ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದೆ.

ಇಂಡೊನೇಷ್ಯಾ ಜಗತ್ತಿನಲ್ಲಿ ಅತಿ ಹೆಚ್ಚು ನೈಸರ್ಗಿಕ ವಿಕೋಪಕ್ಕೆ ತುತ್ತಾಗುವ ದೇಶವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT