ಸೋಮವಾರ, ಜನವರಿ 25, 2021
19 °C

ಮಲೇಷ್ಯಾದಲ್ಲಿ ‘ಕೊರೊನಾವೈರಸ್‌ ತುರ್ತುಪರಿಸ್ಥಿತಿ’ ಘೋಷಣೆ

ಎಪಿ Updated:

ಅಕ್ಷರ ಗಾತ್ರ : | |

Prajavani

ಕ್ವಾಲಾಲಂಪುರ: ಕೊರೊನಾವೈರಸ್‌ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮಲೇಷ್ಯಾದಲ್ಲಿ ತುರ್ತುಪರಿಸ್ಥಿತಿ ಘೋಷಣೆಗೆ ಅಲ್ಲಿನ ರಾಜ ಅಂಗೀಕಾರ ನೀಡಿದ್ದು, ಆಗಸ್ಟ್‌ವರೆಗೆ ಸಂಸತ್‌ ಅನ್ನು ಅಮಾನತಿನಲ್ಲಿಡಲಾಗುತ್ತಿದೆ.

ತುರ್ತುಪರಿಸ್ಥಿತಿ ಘೋಷಣೆ ಹಿನ್ನೆಲೆಯಲ್ಲಿ ಈಗ ನಡೆಯಬೇಕಾಗಿದ್ದ ಸಾರ್ವತ್ರಿಕ ಚುನಾವಣೆಯನ್ನು ಮುಂದೂಡಲಾಗುತ್ತಿದೆ.

ತುರ್ತುಪರಿಸ್ಥಿತಿ ಘೋಷಣೆ ಅಂಗೀಕಾರವಾದ ನಂತರ ದೂರದರ್ಶನದ ಮೂಲಕ ಮಾತನಾಡಿದ ಪ್ರಧಾನ ಮಂತ್ರಿ ಮೊಹಿದ್ದೀನ್‌, ‘ಈಗ ಘೋಷಿಸಿರುವ ತುರ್ತು ಪರಿಸ್ಥಿತಿ ಯಾವುದೇ ಸೇನಾ ದಂಗೆಯಲ್ಲ. ಈಗ ದೇಶದಲ್ಲಿ ಕರ್ಫ್ಯೂ ವಿ‌ಧಿಸುವುದಿಲ್ಲ‘ ಎಂದು ಮಲೇಷ್ಯಾ ನಾಗರಿಕರಿಗೆ ಭರವಸೆ ನೀಡಿದರು. ‘ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಮ್ಮ ಸರ್ಕಾರ ಉಸ್ತುವಾರಿಯಾಗಿ ದೇಶವನ್ನು ಮುನ್ನಡೆಸಲಿದೆ‘ ಎಂದು ತಿಳಿಸಿದರು.

ಕ್ವಾಲಾಲಂಪುರದ ಆಡಳಿತಾತ್ಮಕ ರಾಜಧಾನಿ ಪುತ್ರಜಯ ಸೇರಿದಂತೆ ಐದು ರಾಜ್ಯಗಳಲ್ಲಿ ಲಾಕ್‌ಡೌನ್‌ ತೆರವುಗೊಳಿಸುವ ಒಂದು ದಿನದ ಮೊದಲು ಮಲೇಷ್ಯಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿರುವುದು ಜನರಲ್ಲಿ ಅಚ್ಚರಿ ಮೂಡಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು