ಮಂಗಳವಾರ, ಮಾರ್ಚ್ 28, 2023
30 °C

ಪರಿಸರದ ಬಿಕ್ಕಟ್ಟುಗಳು ಮಾನವ ಹಕ್ಕುಗಳಿಗಿರುವ ಅತಿದೊಡ್ಡ ಸವಾಲು: ವಿಶ್ವಸಂಸ್ಥೆ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ಜಿನಿವಾ: ಹವಾಮಾನ ಬದಲಾವಣೆ, ಜನಸಂಖ್ಯೆ ಮತ್ತು ಪ್ರಾಕೃತಿಕ ವಿನಾಶದಂತಹ ʼತ್ರಿವಳಿ ಜಾಗತಿಕ ಬಿಕ್ಕಟ್ಟುʼಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನವ ಹಕ್ಕುಗಳಿಗಿರುವ ಏಕೈಕ ದೊಡ್ಡ ಸವಾಲು ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದ ಮುಖ್ಯಸ್ಥೆ ಮಿಚೇಲ್‌ ಬ್ಯಾಚೆಲೆಟ್‌ ಹೇಳಿದ್ದಾರೆ.

ಜರ್ಮನಿಯಲ್ಲಿ ಉಂಟಾದ ಪ್ರವಾಹ ಮತ್ತು ಕ್ಯಾಲಿಫೋರ್ನಿಯಾದ ಕಾಳ್ಗಿಚ್ಚನ್ನು ಉಲ್ಲೇಖಿಸಿ ಮಾನವ ಹಕ್ಕುಗಳ ಮಂಡಳಿ ಸಭೆಯಲ್ಲಿ ಮಾತನಾಡಿದ ಬ್ಯಾಚೆಲೆಟ್‌, ʼಪರಿಸರದ ಆಪತ್ತುಗಳು ತೀವ್ರಗೊಂಡಂತೆ, ನಮ್ಮ ಕಾಲಘಟ್ಟದ ಮಾನವ ಹಕ್ಕುಗಳಿಗೆ ಬೃಹತ್ ಸಮಸ್ಯೆಯಾಗಿ ಪರಿಣಮಿಸುತ್ತವೆʼ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ʼನಾವು ಕಟ್ಟುಪಾಡುಗಳನ್ನು ವಿಧಿಸಿಕೊಳ್ಳಬೇಕು. ವಾಸ್ತವದಲ್ಲಿ ನಮ್ಮ ಭವಿಷ್ಯವು ಅದನ್ನೇ ಅವಲಂಭಿಸಿದೆʼ ಎಂದೂ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು