ಬುಧವಾರ, ಜೂನ್ 16, 2021
27 °C

ಭಾರತದಲ್ಲಿ ಆಶ್ರಯ ಕೋರಿದ 6,000 ಮ್ಯಾನ್ಮಾರ್‌ ನಿರಾಶ್ರಿತರು

ಪಿಟಿಐ Updated:

ಅಕ್ಷರ ಗಾತ್ರ : | |

ವಿಶ್ವಸಂಸ್ಥೆ: ಮ್ಯಾನ್ಮಾರ್‌ನ 4,000– 6,000 ನಿರಾಶ್ರಿತರು ಭಾರತದಲ್ಲಿ ಆಶ್ರಯ ಕೋರಿದ್ದಾರೆ ಎಂದು ವಿಶ್ವಸಂಸ್ಥೆಯ ವಕ್ತಾರರು ಹೇಳಿದ್ದಾರೆ. ಮ್ಯಾನ್ಮಾರ್‌ನಲ್ಲಿ ಮಿಲಿಟರಿ ದಂಗೆ ಆರಂಭವಾದ ಫೆಬ್ರುವರಿ ತಿಂಗಳಿನಿಂದಲೂ ಅಲ್ಲಿಂದ ವಿವಿಧೆಡೆಗೆ ತೆರಳುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ ಎಂದು ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

ಕಳೆದ ವಾರದವರೆಗೆ 60,700 ಮಂದಿ ಮಹಿಳೆಯರು, ಪುರುಷರು ಮತ್ತು ಮಕ್ಕಳನ್ನು ಆಂತರಿಕವಾಗಿ ಸ್ಥಳಾಂತರಿಸಲಾಗಿದೆ.

ಮಾರ್ಚ್‌ ಮತ್ತು ಏಪ್ರಿಲ್‌ನಲ್ಲಿ 1,700ಕ್ಕೂ ಹೆಚ್ಚು ನಿರಾಶ್ರಿತರು ಥಾಯ್ಲೆಂಡ್‌ಗೆ ಬಂದಿದ್ದು ಇವರಲ್ಲಿ ಅನೇಕರು ನಂತರದಲ್ಲಿ ಮ್ಯಾನ್ಮಾರ್‌ಗೆ ಮರಳಿದ್ದಾರೆ. ಸುಮಾರು 4,000–6,000 ಮಂದಿ ಭಾರತದಲ್ಲಿ ರಕ್ಷಣೆ ಕೋರಿದ್ದಾರೆ ಎಂದು ವಿಶ್ವಸ್ಥಂಸ್ಥೆಯ ಮಹಾ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್‌ ಅವರ ವಕ್ತಾರ ಸ್ಟೀಫನ್‌ ಡುಜ್ಯಾರಿಕ್‌ ವರದಿಗಾರರಿಗೆ ತಿಳಿಸಿದ್ದಾರೆ.

ಮ್ಯಾನ್ಮಾರ್‌ ಭಾರತದೊಂದಿಗೆ ಸುಮಾರು 1,600 ಕಿ.ಮೀ ಉದ್ದದವರೆಗೆ ಬೇಲಿ ಹಾಕಿಲ್ಲದ ಗಡಿಯನ್ನು ಹೊಂದಿದೆ. ಮ್ಯಾನ್ಮಾರ್‌ನೊಂದಿಗೆ ಭಾರತದ ಅರುಣಾಚಲ ಪ್ರದೇಶ, ನಾಗಾಲ್ಯಾಂಡ್‌, ಮಣಿಪುರ ಮತ್ತು ಮಿಜೋರಂ ಗಡಿಯನ್ನು ಹಂಚಿಕೊಂಡಿವೆ.

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು