ಬುಧವಾರ, ಜನವರಿ 20, 2021
21 °C

ಶಾಂತಿಯುತವಾಗಿ ಅಧಿಕಾರ ಹಸ್ತಾಂತರಿಸಿ: ಟ್ರಂಪ್‌ಗೆ ರಕ್ಷಣಾ ಕಾರ್ಯದರ್ಶಿಗಳ ಸಲಹೆ

ಎ.ಪಿ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್: ‘ಚುನಾವಣೆ ಅಕ್ರಮ ಕುರಿತ ತಮ್ಮ ಆರೋಪಗಳ ಸಮರ್ಥನೆಗೆ ಸೇನೆಯನ್ನು ಬಳಸಿಕೊಳ್ಳುವ ಯಾವುದೇ ಯತ್ನ ಬೇಡ’ ಎಂದು 10 ಮಂದಿ ಮಾಜಿ ರಕ್ಷಣಾ ಕಾರ್ಯದರ್ಶಿಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಎಚ್ಚರಿಸಿದ್ದಾರೆ.

‘ಇಂಥ ಪ್ರಯತ್ನಗಳು ದೇಶವನ್ನು ಅಪಾಯಕಾರಿಯಾದ, ಕಾನೂನುಬಾಹಿರವಾದ ಮತ್ತು ಅಸಾಂವಿಧಾನಿಕ ಸ್ಥಿತಿಗೆ ಒಯ್ಯಲಿವೆ’ ಎಂದು ಮಾಜಿ ಕಾರ್ಯದರ್ಶಿಗಳು ಜಂಟಿ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.

ಇವರ ಹೇಳಿಕೆಗಳನ್ನು ಆಧರಿಸಿದ ವರದಿಯನ್ನು ‘ವಾಷಿಂಗ್ಟನ್‌ ಪೋಸ್ಟ್’ ಭಾನುವಾರ ಪ್ರಕಟಿಸಿದೆ. ‘ಜನವರಿ 20ರಂದು ಶಾಂತಿಯುತವಾಗಿ ಅಧಿಕಾರ ಹಸ್ತಾರಿಸುವ ಸಾಂವಿಧಾನಿಕ ಕರ್ತವ್ಯ ನಿಭಾಯಿಸಬೇಕು’ ಎಂದು ಟ್ರಂಪ್‌ಗೆ ಸಲಹೆ ಮಾಡಿದ್ದಾರೆ.

ಡೆಮಾಕ್ರಾಟ್ ಮತ್ತು ರಿಪಬ್ಲಿಕನ್‌ ಎರಡೂ ಪಕ್ಷಗಳಿಗೆ ಈ ಮಾಜಿ ಕಾರ್ಯದರ್ಶಿಗಳು ಸೇರಿದ್ದಾರೆ. ನ.3ರ ಚುನಾವಣೆ, ನಂತರ ಕೆಲ ರಾಜ್ಯಗಳಲ್ಲಿ ನಡೆದ ಮತಗಳ ಮರುಎಣಿಕೆ, ತಮ್ಮ ವಾದಕ್ಕೆ ಕೋರ್ಟ್‌ನಲ್ಲಿಯೂ ಸಮರ್ಥನೆ ಸಿಗದಿರುವ ಬೆಳವಣಿಗೆಗಳು ಫಲಿತಾಂಶವನ್ನು ಸ್ಪಷ್ಟವಾಗಿಸಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.ಆದರೆ, ಲೇಖನದಲ್ಲಿ ಟ್ರಂಪ್‌ ಅವರನ್ನು ಉಲ್ಲೇಖಿಸಿಲ್ಲ.

ಫಲಿತಾಂಶವನ್ನು ಪ್ರಶ್ನಿಸುವ ಸಮಯ ಮೀರಿದೆ. ಸಾಂವಿಧಾನಿಕ ಕರ್ತವ್ಯಗಳನ್ನು ನಿಭಾಯಿಸಬೇಕಾದ ಸಮಯ ಬಂದಿದೆ. ಫಲಿತಾಂಶ ಪ್ರಶ್ನಿಸಲು ಸೇನೆಯನ್ನು ಬಳಸಿಕೊಳ್ಳುವ ಯಾವುದೇ ಯತ್ನ ಸಲ್ಲದು ಎಂದು ಅವರು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು