2500 ಸೈನಿಕರು ರಷ್ಯಾಗೆ ಶರಣು: ಭವಿಷ್ಯದ ಬಗ್ಗೆ ಆತಂಕ

ಪೋಕ್ರೊವ್‌ಸ್ಕ್ (ಉಕ್ರೇನ್) (ಎಪಿ): ವಶಕ್ಕೆ ಪಡೆದ ಮರಿಯುಪೊಲ್ ಅಜೋವ್‌ಸ್ಟಾಲ್ ಉಕ್ಕು ಸ್ಥಾವರದಿಂದ 2,500 ಉಕ್ರೇನ್ ಸೈನಿಕರು ಶರಣಾಗಿದ್ದಾರೆ ಎಂದು ರಷ್ಯಾ ತಿಳಿಸಿದೆ.
ಈ ಬೆನ್ನಲ್ಲೇ ಇವರನ್ನು ‘ಯುದ್ಧ ಕೈದಿ’ಗಳೆಂದು ಘೋಷಿಸಿ ಅವರನ್ನು ಬಿಡುಗಡೆ ಮಾಡುವಂತೆ ಸೈನಿಕರ ಕುಟುಂಬಸ್ಥರು ಮನವಿ ಮಾಡಿದ್ದಾರೆ. ಉಕ್ರೇನ್ ಸರ್ಕಾರ ಸಹ ಈ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ತಿಳಿಸಿದೆ. ಆದರೆ ಬಂಧಿತರು ನ್ಯಾಯಮಂಡಳಿಯಿಂದ ವಿಚಾರಣೆ ಒಳಪಟ್ಟು ನಂತರವೇ ಬಿಡುಗಡೆಯಾಗಬೇಕು ಎಂದು ರಷ್ಯಾ ಬೆಂಬಲಿತ ಪ್ರತ್ಯೇಕವಾದಿಗಳು ಆಗ್ರಹಿಸುತ್ತಿದ್ದಾರೆ. ಹೀಗಾಗಿ ಬಂಧಿತ ಸೈನಿಕರ ಭವಿಷ್ಯ ಏನು ಎಂಬ ಆತಂಕ ಸೃಷ್ಟಿಯಾಗಿದೆ.
ಆಯಕಟ್ಟಿನ ಮರಿಯುಪೊಲ್ ಬಂದರು ನಗರ ವಶಕ್ಕೆ ಮೂರು ತಿಂಗಳುಗಳಿಂದ ಹರಸಾಹಸ ಪಡುತ್ತಿದ್ದ ರಷ್ಯಾ ಕೊನೆಗೂ ಅದನ್ನು ಸಂಪೂರ್ಣ ವಶಕ್ಕೆ ಪಡೆದಿದೆ. ಇದು ರಷ್ಯಾಗೆ ಲಭಿಸಿರುವ ಮಹತ್ವದ ಗೆಲುವು ಎಂದೇ ಬಣ್ಣಿಸಲಾಗಿದೆ. ಆದರೆ ನಗರದಲ್ಲಿರುವ 20,000 ನಿವಾಸಿಗಳು ಜೀವಭಯದಲ್ಲಿ ಬದುಕುತ್ತಿದ್ದಾರೆ ಎಂದು ವರದಿಯಾಗಿದೆ.
ಡೊನ್‌ಬಾಸ್‌ನಲ್ಲಿ ಪರಿಸ್ಥಿತಿ ಗಂಭೀರ:
ಪೂರ್ವ ಉಕ್ರೇನಿನ ಡೊನ್‌ಬಾಸ್‌ನಲ್ಲಿ ಉಕ್ರೇನ್ ಮತ್ತು ರಷ್ಯಾ ಸೈನಿಕರು ತೀವ್ರ ಹೋರಾಟ ನಡೆಸುತ್ತಿದ್ದು, ಡೊನ್‌ಬಾಸ್ ಪರಿಸ್ಥಿತಿ ಕ್ಲಿಷ್ಟಕರವಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್‌ಸ್ಕಿ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.