ಸೋಮವಾರ, ಏಪ್ರಿಲ್ 12, 2021
25 °C

ಅಮೆರಿಕದಲ್ಲಿ ‘ಆಂತರಿಕ ಭಯೋತ್ಪಾದನೆ’ ಹೆಚ್ಚುತ್ತಿದೆ: ಎಫ್‌ಬಿಐ ಎಚ್ಚರಿಕೆ

ಎಪಿ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಅಮೆರಿಕದ ಕ್ಯಾಪಿಟಲ್‌ ಹಿಲ್‌ನಲ್ಲಿ ನಡೆದ ಗಲಭೆಯನ್ನು ‘ಆಂತರಿಕ ಭಯೋತ್ಪಾದನೆ’ ಎಂದು ಎಫ್‌ಬಿಐ ನಿರ್ದೇಶಕ ಕ್ರಿಸ್ಟೋಫರ್ ವ್ರೇ ಅವರು ಹೇಳಿದ್ದಾರೆ. ಅಮೆರಿಕದಲ್ಲಿ ಆಂತರಿಕ ಹಿಂಸಾಚಾರಗಳು ಹೆಚ್ಚಾಗಿವೆ. ಈ ರೀತಿಯ ಪ್ರಕರಣಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಆದರೂ, ಇಷ್ಟೊಂದು ಪ್ರಕರಣಗಳ ತನಿಖೆ ಸ್ವಲ್ವ ಕಷ್ಟ’ ಎಂದು ಅವರು ತಿಳಿಸಿದರು.

ಕ್ಯಾಪಿಟಲ್‌ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕ್ರಿಸ್ಟೋಫರ್ ವ್ರೇ ಅವರು ಮಂಗಳವಾರ ಸೆನೆಟ್ ನ್ಯಾಯಾಂಗ ಸಮಿತಿ ಮುಂದೆ ವಿಚಾರಣೆಗೆ ಹಾಜರಾದರು. ಈ ವೇಳೆ ಮಾತನಾಡಿದ ಅವರು,‘ಜನವರಿ 6ರಂದು ಗಲಭೆ ನಡೆಯುವ ಸಾಧ್ಯತೆಯಿದೆ ಎಂಬುದರ ಬಗ್ಗೆ ನಾವು ಎಚ್ಚರಿಕೆ ನೀಡಿರುವುದು ನಿಜ. ಆದರೆ ರಿಪಬ್ಲಿಕನ್‌ ನಾಯಕರು ಹೇಳುವಂತೆ ಟ್ರಂಪ್‌ ವಿರೋಧಿ ಬಣ ಈ ಹಿಂಸಾಚಾರ ನಡೆಸಿದೆ ಎಂಬ ವಿಷಯ ಸುಳ್ಳು’ ಎಂದು ಹೇಳಿದ್ದಾರೆ.

‘ಜನವರಿ 6 ರಂದು ನಡೆದ ಹಿಂಸಾಚಾರ ಹೊಸದೇನಲ್ಲ. ಅಮೆರಿಕದಲ್ಲಿ ಕಳೆದ ಹಲವು ವರ್ಷಗಳಿಂದ ಆಂತರಿಕ ಹಿಂಸಾಚಾರಗಳು ನಡೆಯುತ್ತಿವೆ. ಈ ಸಮಸ್ಯೆ ಇಷ್ಟು ಬೇಗ ನಿವಾರಣೆಯಾಗುವುದಿಲ್ಲ. ಆಂತರಿಕ ಹಿಂಸಾಚಾರದ ಬಗ್ಗೆ ಎಫ್‌ಬಿಐ ಹಲವು ವರ್ಷಗಳಿಂದ ಎಚ್ಚರಿಕೆ ನೀಡುತ್ತಾ ಬಂದಿದೆ’ ಎಂದು ಅವರು ತಿಳಿಸಿದರು.

‘ಸೆಪ್ಟೆಂಬರ್‌ 11, 2001ರ ದಾಳಿಯು ಅಂತರರಾಷ್ಟ್ರೀಯ ಭಯೋತ್ಪಾದನೆ ಬಗ್ಗೆ ಎಚ್ಚರಿಕೆ ನೀಡಿತು. ಅದೇ ರೀತಿ ಕ್ಯಾಪಿಟಲ್‌ ಹಿಲ್ ಮೇಲಿನ‌ ದಾಳಿಯು ಆಂತರಿಕ ಹಿಂಸಾಚಾರದ ಬಗ್ಗೆ ಎಚ್ಚರಿಕೆ ನೀಡಿದೆ. ಕಳೆದ ವರ್ಷ ಆಂತರಿಕ ಹಿಂಸಾಚಾರದ 1,400 ಪ್ರಕರಣಗಳು ವರದಿಯಾಗಿದ್ದವು. ಈ ವರ್ಷ 2,000 ಪ್ರಕರಣಗಳು ವರದಿಯಾಗಿವೆ’ ಎಂದು ಅವರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು