ಭಾನುವಾರ, 11 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಟೊ ಸೇರ್ಪಡೆಗೆ ಅರ್ಜಿ ಹಾಕುತ್ತೇವೆ: ರಷ್ಯಾಗೆ ಫಿನ್‌ಲ್ಯಾಂಡ್ ಸ್ಪಷ್ಟನೆ

Last Updated 14 ಮೇ 2022, 15:38 IST
ಅಕ್ಷರ ಗಾತ್ರ

ಹೆಲ್ಸಿಂಕಿ: ಮುಂಬರುವ ದಿನಗಳಲ್ಲಿ ನ್ಯಾಟೊ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸುವ ಕುರಿತಂತೆ ನಿರ್ಧರಿಸಲಾಗುತ್ತದೆ’ಎಂದು ಫಿನ್‌‌ಲ್ಯಾಂಡ್ ಅಧ್ಯಕ್ಷ ಸೌಲಿ ನಿನಿಸ್ಟೊ ಶನಿವಾರ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ತಿಳಿಸಿದ್ದಾರೆ.

ರಷ್ಯಾದೊಂದಿಗೆ ಸುದೀರ್ಘ ಗಡಿ ಹಂಚಿಕೊಂಡಿರುವ ಫಿನ್‌ಲ್ಯಾಂಡ್, ರಷ್ಯಾ ಮತ್ತು ಉಕ್ರೇನ್ ಸಂಘರ್ಷದ ನಡುವೆ ಈ ನಿರ್ಧಾರಕ್ಕೆ ಬಂದಿದೆ.

ಫೆಬ್ರವರಿ 24 ರಂದು ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಆರಂಭವಾದ ನಂತರ ಫಿನ್‌ಲ್ಯಾಂಡ್‌ನ ಭದ್ರತಾ ವಾತಾವರಣವು ಸಂಪೂರ್ಣವಾಗಿ ಬದಲಾಗಿದೆ ಎಂದು ಫಿನ್‌ಲ್ಯಾಂಡ್ ಅಧ್ಯಕ್ಷರು ದೂರವಾಣಿ ಸಂಭಾಷಣೆಯಲ್ಲಿ ಪುಟಿನ್‌ಗೆ ತಿಳಿಸಿದ್ದಾರೆ. ಇದೇವೇಳೆ, ಪಾಶ್ಚಿಮಾತ್ಯ 30 ದೇಶಗಳ ಮಿಲಿಟರಿ ಮೈತ್ರಿಕೂಟ ನ್ಯಾಟೋದ ಸದಸ್ಯತ್ವ ಪಡೆಯುವ ಪ್ರಯತ್ನದಿಂದ ಹಿಂದೆ ಸರಿಯುವಂತೆ ರಷ್ಯಾದ ಬೇಡಿಕೆ ಕುರಿತಂತೆಯೂ ಮಾತುಕತೆ ನಡೆಸಲಾಗಿದೆ ಎಂದು ಅಧ್ಯಕ್ಷರ ಕಚೇರಿ ತಿಳಿಸಿದೆ.

‘ಪುಟಿನ್ ಜೊತೆಗಿನ ಚರ್ಚೆಯು ನೇರ ಮತ್ತು ನಿಸ್ಸಂದಿಗ್ಧವಾಗಿತ್ತು. ಯಾವುದೇ ಉತ್ಪ್ರೇಕ್ಷೆಯಿಲ್ಲದೆ ನಡೆಯಿತು. ದೇಶ ದೇಶಗಳ ನಡುವೆ ಉದ್ವಿಗ್ನತೆಯನ್ನು ತಪ್ಪಿಸುವುದು ಮುಖ್ಯವೆಂದು ಪರಿಗಣಿಸಲಾಗಿದೆ’ಎಂದು 2012 ರಿಂದ ಫಿನ್‌ಲ್ಯಾಂಡ್‌ನ ಅಧ್ಯಕ್ಷರಾಗಿರುವ ಮತ್ತು ಕಳೆದ ಹತ್ತು ವರ್ಷಗಳಲ್ಲಿ ಪುಟಿನ್ ಅವರೊಂದಿಗೆ ನಿಯಮಿತವಾಗಿ ಮಾತುಕತೆಯಲ್ಲಿ ತೊಡಗಿರುವ ಕೆಲವೇ ಕೆಲವು ಪಾಶ್ಚಿಮಾತ್ಯ ನಾಯಕರಲ್ಲಿ ಒಬ್ಬರಾದ ನಿನಿಸ್ಟೊ ಹೇಳಿದ್ದಾರೆ.

'ಪ್ರತಿ ಸ್ವತಂತ್ರ ರಾಷ್ಟ್ರವು ತನ್ನದೇ ಆದ ಭದ್ರತಾ ಸಾಮರ್ಥ್ಯವನ್ನು ಗರಿಷ್ಠಗೊಳಿಸಲು ಪ್ರಯತ್ನಿಸುತ್ತವೆ’ ಎಂದು 2012 ರ ತಮ್ಮ ಮೊದಲ ಸಭೆಯಲ್ಲೇ ಪುಟಿನ್ ಅವರಿಗೆ ನಿನಿಸ್ಟೊ ಸ್ಪಷ್ಟಪಡಿಸಿದ್ದಾರೆ. ಈಗಲೂ ನ್ಯಾಟೋ ಸೇರುವ ಮೂಲಕ ಫಿನ್‌ಲ್ಯಾಂಡ್ ತನ್ನ ಭದ್ರತೆಯನ್ನು ಬಲಪಡಿಸಿಕೊಳ್ಳುತ್ತದೆ’ಎಂದು ನಿನಿಸ್ಟೋ ಸ್ಪಷ್ಟಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT