ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊಂಗಾ ವಿಮಾನ ನಿಲ್ದಾಣದ ಬೂದಿ ತೆರವು; ಆಗಮಿಸಿದ ಪರಿಹಾರ ವಿಮಾನ

Last Updated 20 ಜನವರಿ 2022, 15:04 IST
ಅಕ್ಷರ ಗಾತ್ರ

ವೆಲ್ಲಿಂಗ್ಟನ್‌: ಪೆಸಿಫಿಕ್‌ ಸಮುದ್ರದಲ್ಲಿ ಜ್ವಾಲಾಮುಖಿ ಸ್ಫೋಟಿಸಿ ಟೊಂಗಾ ದ್ವೀಪದಫುಅಅಮೊಟೊ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ರನ್‌ವೇಯಲ್ಲಿ ತುಂಬಿದ್ದ ಬೂದಿಯನ್ನು ಗುರುವಾರ ತೆರವುಗೊಳಿಸಲಾಗಿದ್ದು, ನ್ಯೂಜಿಲೆಂಡ್‌ ಕಳುಹಿಸಿಕೊಟ್ಟ ಪರಿಹಾರ ಸಾಮಗ್ರಿ ಹೊತ್ತು ವಿಮಾನ ಅಲ್ಲಿ ಇಳಿದಿದೆ.

ಆಸ್ಟ್ರೇಲಿಯಾ ಸಹ ಪರಿಹಾರ ಸಾಮಗ್ರಿ ಹೊತ್ತ ವಿಮಾನ ಕಳುಹಿಸಿಕೊಟ್ಟಿದೆ. ನ್ಯೂಜಿಲೆಂಡ್‌ ಒಂದು ನೌಕಾಪಡೆ ಯುದ್ಧನೌಕೆಯನ್ನು ಸಹ ಟೊಂಗಾಗೆ ಕಳುಹಿಸಿಕೊಟ್ಟಿದೆ.

ಸುನಾಮಿಯಿಂದಾಗಿ ಟೊಂಗಾ ದ್ವೀಪದ 84 ಸಾವಿರಕ್ಕೂ ಅಧಿಕ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪರಿಹಾರ ಸಾಮಗ್ರಿಗಳ ಜತೆ ಕೋವಿಡ್ ಸೋಂಕು ಸಹ ದ್ವೀಪವನ್ನು ಪ್ರವೇಶಿಸದಂತೆ ನೋಡಿಕೊಳ್ಳಲು ಎಚ್ಚರ ವಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT