ಬುಧವಾರ, ಸೆಪ್ಟೆಂಬರ್ 29, 2021
20 °C

ಸುಡಾನ್‌ನಲ್ಲಿ ಭಾರೀ ಮಳೆ: ಸಾವಿರಾರು ಮನೆಗಳು ನೆಲಸಮ

ಎಪಿ Updated:

ಅಕ್ಷರ ಗಾತ್ರ : | |

ಖಾರ್‌ತೋಮ್: ಸುಡಾನ್ ದೇಶದಲ್ಲಿ ಭಾರೀ ಮಳೆಯಿಂದ ಸಾವಿರಾರು ಮನೆಗಳು ನೆಲಸಮವಾಗಿದ್ದು, ರಾಜಧಾನಿ ಖಾರ್‌ತೋಮ್‌ನಲ್ಲಿ ವ್ಯಾಪಕ ನೀರು ತುಂಬಿಕೊಂಡಿದೆ.

ಕಳೆದ ನಾಲ್ಕು ದಿನಗಳಲ್ಲಿ ಸುರಿದ ಮಳೆಯಿಂದ ಸುಡಾನ್‌ನ 8 ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, 12 ಸಾವಿರ ಜನರು ನಿರಾಶ್ರಿತರಾಗಿದ್ದಾರೆ ಎಂದು ವರದಿ ತಿಳಿಸಿದೆ. ಈ ಪ್ರದೇಶಗಳಲ್ಲಿ 800 ಮನೆಗಳು ಸಂಪೂರ್ಣ ನೆಲಸಮವಾಗಿದ್ದು ಸುಮಾರು 4400 ಮನೆಗಳಿಗೆ ಹಾನಿಯಾಗಿದೆ. ಆದರೆ, ಪ್ರಾಣ ಹಾನಿಯ ಬಗ್ಗೆ ವರದಿಯಾಗಿಲ್ಲ.

ಕಳೆದ ವರ್ಷ ಸಂಭವಿಸಿದ ಪ್ರವಾಹದಲ್ಲಿ ಸುಮಾರು 6.50 ಲಕ್ಷ ಜನ ನಿರಾಶ್ರಿತರಾಗಿದ್ದು, 1.10 ಲಕ್ಷ ಮನೆಗಳು ನಾಶವಾಗಿದ್ದವು.

ಜೂನ್‌ನಿಂದ ಅಕ್ಟೋಬರ್‌ನಲ್ಲಿ ಸುಡಾನ್‌ನಲ್ಲಿ ಮಳೆಯಾಗುವ ಅವಧಿಯಾಗಿದ್ದು, ಈ ಸಂದರ್ಭದಲ್ಲಿ ಉಂಟಾಗುವ ಪ್ರವಾಹಕ್ಕೆ ಪ್ರಾಣಹಾನಿ, ಆಸ್ತಿಪಾಸ್ತಿ ಹಾಗೂ ಅಪಾರ ಬೆಳೆನಾಶ ಪ್ರತಿ ವರ್ಷ ಆಗುತ್ತಿದೆ.

ಇದನ್ನೂ ಓದಿ: ಅಮೆರಿಕ: ಪಾಂಪಿಯೊಗೆ ಜಪಾನ್‌ ನೀಡಿದ್ದ ವಿಸ್ಕಿ ಬಾಟಲಿಗಳು ನಾಪತ್ತೆ, ತನಿಖೆ ಆರಂಭ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು