ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂತ್ರಜ್ಞಾನದ ಹಕ್ಕುಸ್ವಾಮ್ಯಕ್ಕಾಗಿ ‘ಸುಪ್ರೀಂ’ ಮೆಟ್ಟಿಲೇರಿದ ಒರಾಕಲ್‌, ಗೂಗಲ್‌

Last Updated 7 ಅಕ್ಟೋಬರ್ 2020, 9:36 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಹಕ್ಕುಸ್ವಾಮ್ಯ ವಿವಾದ ಕುರಿತು ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಕಂಪನಿಗಳಾದ ಗೂಗಲ್‌ ಮತ್ತು ಒರಾಕಲ್‌ ಅಮೆರಿಕದ ಸುಪ್ರೀಂ ಕೊರ್ಟ್‌ ಮೆಟ್ಟಿಲೇರಿವೆ.

ಕೋಟ್ಯಂತರ ಡಾಲರ್‌ ಮೌಲ್ಯದ ಪ್ರಕರಣ ಇದಾಗಿದ್ದು, ಭವಿಷ್ಯದಲ್ಲಿ ಸಾಫ್ಟ್‌ವೇರ್‌ ಅಭಿವೃದ್ಧಿ ದೃಷ್ಟಿಯಿಂದ ಮಹತ್ವ ಪಡೆದಿದೆ.

ಜಗತ್ತಿನಾದ್ಯಂತ ಸದ್ಯ ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸುವ ಆಂಡ್ರಾಯ್ಡ್ ಆಪರೇಟಿಂಗ್‌ ಸಿಸ್ಟ್‌ಂ ಸಂಬಂಧಿಸಿದ ಪ್ರಕರಣ ಇದಾಗಿದೆ. ಈ ಆಪರೇಟಿಂಗ್‌ ಸಿಸ್ಟ್ಂ ತನ್ನದು ಎಂದು ಗೂಗಲ್‌ ಪ್ರತಿಪಾದಿಸಿದೆ.

ಗೂಗಲ್‌ನ ಈ ಆಂಡ್ರಾಯ್ಡ್ ಸಾಫ್ಟ್‌ವೇರ್‌ ಅನ್ನು 2007ರಲ್ಲಿ ಬಿಡುಗಡೆಗೊಳಿಸಲಾಗಿತ್ತು. ಇದನ್ನು ತಯಾರಿಸಲು ಲಕ್ಷಾಂತರ ಹೊಸ ಕಂಪ್ಯೂಟರ್‌ ಕೋಡ್‌ಗಳನ್ನು ಬಳಸಲಾಗಿದೆ. ಇದರಲ್ಲಿಒರಾಕಲ್‌ನ ಜಾವಾ ತಂತ್ರಜ್ಞಾನದ 11,330 ಕೋಡ್‌ಗಳನ್ನು ಗೂಗಲ್‌ ಬಳಸಿಕೊಂಡಿದೆ.

ಗೂಗಲ್‌ ಈ ಕ್ರಮವನ್ನು ಸಮರ್ಥಿಸಿಕೊಂಡಿದೆ. ಉದ್ಯಮ ವಲಯದಲ್ಲಿ ಇದೊಂದು ಸಾಮಾನ್ಯ ಪದ್ಧತಿಯಾಗಿದೆ. ತಾಂತ್ರಿಕತೆಯ ಪ್ರಗತಿಯ ದೃಷ್ಟಿಯಿಂದ ಇದೊಂದು ಉತ್ತಮ ಕ್ರಮವಾಗಿದೆ ಎಂದು ಗೂಗಲ್‌ ಹೇಳಿದೆ.

‘ಇದು ಕೃತಿಚೌರ್ಯ. ಹಕ್ಕುಸ್ವಾಮ್ಯದ ಉಲ್ಲಂಘನೆಯಾಗಿದೆ. ಕಳ್ಳತನ ಪ್ರಕರಣ ಇದು’ ಎಂದು ಒರಾಕಲ್ ಸಂಸ್ಥೆಯು‌ ಸುಪ್ರೀಂಕೋರ್ಟ್‌ ಮೊರೆ ಹೋಗಿದೆ. ಒರಾಕಲ್‌ ಸಂಸ್ಥೆಯು ಗೂಗಲ್‌ ವಿರುದ್ಧ ಹಕ್ಕುಸ್ವಾಮ್ಯ ಆರೋಪದಡಿ 800 ಕೋಟಿ ಡಾಲರ್‌ ಮೊಕದ್ದಮೆ ಹೂಡಿದೆ.

ದಶಕಗಳಿಂದ ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಒರಾಕಲ್‌ನ ಪ್ರತಿಪಾದಿಸಿದ್ದ ಹಕ್ಕು ಸ್ವಾಮ್ಯವನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು. ಆದರೆ, ಮೇಲ್ಮನವಿ ಸಲ್ಲಿಸಿದಾಗ ಈ ಆದೇಶವನ್ನು ರದ್ದುಪಡಿಸಲಾಯಿತು. ಗೂಗಲ್‌ ಪರ ತೀರ್ಪು ನೀಡಿದ ನ್ಯಾಯಾಧೀಶರು, ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಹೀಗಾಗಿ, ಸದ್ಯ ಈ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ. ಗೂಗಲ್‌ ನಕಲು ಮಾಡಿರುವ ತಂತ್ರಜ್ಞಾನಕ್ಕೆ 1976ರ ಹಕ್ಕುಸ್ವಾಮ್ಯ ಕಾಯ್ದೆ ರಕ್ಷಣೆ ಒದಗಿಸುತ್ತದೆಯೇ ಮತ್ತು ಈ ರೀತಿ ತಂತ್ರಜ್ಞಾನವನ್ನು ಬಳಸಲು ಅವಕಾಶವಿದೆಯೇ ಎನ್ನುವ ಪ್ರಶ್ನೆ ನ್ಯಾಯಾಲಯದ ಮುಂದಿದೆ.

‘ಕೆಲವು ಸಾಫ್ಟ್‌ವೇರ್‌ಗಳ ಬಗ್ಗೆ ಯಾರೂ ಹಕ್ಕುಸ್ವಾಮ್ಯ ಪ್ರತಿಪಾದಿಸುವುದಿಲ್ಲ. ಆದರೆ, ಒರಾಕಲ್‌ ಮಾತ್ರ ಪ್ರತಿಪಾದಿಸುತ್ತಿದೆ’ ಎಂದು ಗೂಗಲ್‌ನ ಮುಖ್ಯ ಕಾನೂನು ಅಧಿಕಾರಿ ಕೆಂಟ್‌ ವಾಕರ್‌ ಹೇಳಿದ್ದಾರೆ.

ಮೈಕ್ರೊಸಾಫ್ಟ್‌, ಐಬಿಎಂ ಸೇರಿದಂತೆ ಹಲವು ಕಂಪನಿಗಳು ಗೂಗಲ್‌ಗೆ ಬೆಂಬಲ ನೀಡಿವೆ. ಟ್ರಂಪ್‌ ಆಡಳಿತ, ಮೋಷನ್‌ ಪಿಕ್ಚರ್‌ ಅಸೋಸಿಯೇಷನ್‌ ಮತ್ತು ರಿಕಾರ್ಡಿಂಗ್‌ ಅಸೋಸಿಯೇಷನ್‌ ಆಫ್‌ ಅಮೆರಿಕ ಒರಾಕಲ್‌ಗೆ ಬೆಂಬಲ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT