ವಾಷಿಂಗ್ಟನ್: ಎಚ್1ಬಿ ವೀಸಾ ಸೇರಿದಂತೆ ಇತರೆ ವಲಸೆ ವೀಸಾಗಳ ಶುಲ್ಕವನ್ನು ಹೆಚ್ಚಿಸಲು ಅಮೆರಿಕ ಪೌರತ್ವ ಮತ್ತು ವಲಸೆ ಸೇವೆಯು (ಯುಎಸ್‌ಸಿಐಎಸ್) ಬುಧವಾರ ಪ್ರಸ್ತಾವ ಮುಂದಿಟ್ಟಿದೆ. ಭಾರತದ ಐಟಿ ಉದ್ಯೋಗಿಗಳಲ್ಲಿ ಎಚ್1ಬಿ ವೀಸಾ ಹೆಚ್ಚು ಜನಪ್ರಿಯವಾಗಿದೆ.

ಶುಲ್ಕ ಹೆಚ್ಚಳದ ಬಗ್ಗೆ ಪರಿಶೀಲನೆ ನಡೆಸಿಯೇ ಈ ಪ್ರಸ್ತಾವವನ್ನು ಮುಂದಿಡಲಾಗಿದೆ. ಈ ಶುಲ್ಕಗಳು 2016ರಿಂದ ಬದಲಾವಣೆಯಾಗಿರಲಿಲ್ಲ. ಅಮೆರಿಕ ಪೌರತ್ವ ಮತ್ತು ವಲಸೆ ಸೇವೆಯ ತನ್ನ ಖರ್ಚು–ವೆಚ್ಚಗಳನ್ನು ವಲಸೆ ಮತ್ತು ಪೌರತ್ವ ಅರ್ಜಿದಾರರಿಂದ ಪಡೆದ ಶುಲ್ಕದಿಂದಲೇ ಭರಿಸುತ್ತದೆ ಎಂದು ಆಂತರಿಕ ಭದ್ರತಾ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಈ ಪ್ರಸ್ತಾವಕ್ಕೆ ಸಾರ್ವಜನಿಕರು ತಮ್ಮ ಪ್ರತಿಕ್ರಿಯೆ ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಲಾಗಿದೆ. ನಂತರ ಈ ಪ್ರಸ್ತಾವವು ಜಾರಿಯಾಗುವ ನಿರೀಕ್ಷೆ ಇದೆ. ಕೃಷಿಯೇತರ ಕಾರ್ಮಿಕರು ಹಾಗೂ ಅಲ್ಪಕಾಲ ಇರುವುದಕ್ಕಾಗಿ ಅಮೆರಿಕಕ್ಕೆ ಬರುವವರಿಗೆ ನೀಡಲಾಗುವ ಎಚ್–2ಬಿ ವೀಸಾದ ಅರ್ಜಿ ಶುಲ್ಕ ಹೆಚ್ಚಿಸುವ ಪ್ರಸ್ತಾವವೂ ಇದೆ. 460 ಡಾಲರ್‌ನಿಂದ (₹38,180) 1,080 ಡಾಲರ್‌ಗೆ (₹ 86,400) ಹೆಚ್ಚಿಸಲು ಉದ್ದೇಶಿಸಲಾಗಿದೆ.

ಅಮೆರಿಕಕ್ಕೆ ವಲಸೆ ಬರುವವರು ಕಾನೂನು ಪ್ರಕಾರವೇ ಬರಬೇಕು ಎನ್ನುವುದು ಅಮೆರಿಕ ಸರ್ಕಾರದ ಇಚ್ಛೆಯಾಗಿದೆ. ಆದರೆ, ಈ ಪ್ರಸ್ತಾವವು ಇದಕ್ಕೆ ವಿರೋಧವಾಗಿದೆ ಎಂದು ಆರ್ಥಿಕತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದು ಪೋಬ್ಸ್ ವರದಿ ಮಾಡಿದೆ.

ಅಮೆರಿಕದಲ್ಲಿರುವ ಹಲವು ಐಟಿ ಕಂಪನಿಗಳು ಭಾರತ ಹಾಗೂ ಚೀನಾದವರಿಗೆ ದೊಡ್ಡ ಸಂಖ್ಯೆಯಲ್ಲಿ ಉದ್ಯೋಗ ನೀಡುತ್ತಿದೆ.

ವೀಸಾ ಅರ್ಜಿಯ ಶುಲ್ಕ

ವೀಸಾ;ಪ್ರಸ್ತುತ ಇರುವ ಶುಲ್ಕ;ಪ್ರಸ್ತಾವಿತ ಶುಲ್ಕ

ಎಚ್–1ಬಿ;460 ಡಾಲರ್ (₹38,180);780 ಡಾಲರ್ (₹ 62,400)

ಎಲ್–1;460 ಡಾಲರ್ (₹ 36,800);1,385 ಡಾಲರ್ (₹1,10,800)

ಒ–1;460 ಡಾಲರ್ (₹ 36,800);1,055 (₹84,400)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.