ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ನಿ ಕಮಲಾಗಾಗಿ ವೃತ್ತಿ ತೊರೆಯಲು ಸಿದ್ಧರಾದ ಡೌಗ್ಲಾಸ್ ಎಮ್ಹಾಫ್‌

Last Updated 11 ನವೆಂಬರ್ 2020, 15:07 IST
ಅಕ್ಷರ ಗಾತ್ರ

ಸ್ಯಾಕ್ರಮೆಂಟೊ: ಅಮೆರಿಕದ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಕಮಲಾ ಹ್ಯಾರಿಸ್‌ ಅವರ ರಾಜಕೀಯ ಜೀವನ ಬೆಂಬಲಿಸುವ ಸಲುವಾಗಿ ಅವರ ಪತಿ ಡೌಗ್ಲಾಸ್ ಎಮ್ಹಾಫ್‌ ತಮ್ಮ ಉದ್ಯೋಗ ತೊರೆಯಲು ಸಿದ್ಧರಾಗಿದ್ದಾರೆ.

ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಖಾಸಗಿ ವಕೀಲರಾಗಿರುವ ಎಮ್ಹಾಫ್‌ ಅವರು, ಶ್ವೇತಭವನದಲ್ಲಿ ಕಮಲಾ ತಮ್ಮ ಅಧಿಕಾರ ಸ್ವೀಕರಿಸುವ ದಿನದಂದೇ ತಮ್ಮ ವೃತ್ತಿ ತೊರೆಯಲಿದ್ದಾರೆ.

ಎಮ್ಹಾಫ್‌ ಅವರ ನಿರ್ಧಾರದ ಬಗ್ಗೆ ಮೆಚ್ಚುಗೆ ಸೂಚಿಸಿರುವ 'ಕ್ಯಾಲಿಫೋರ್ನಿಯಾ ಸ್ಟೇಟ್ ಯುನಿವರ್ಸಿಟಿ’ಯ ರಾಜ್ಯಶಾಸ್ತ್ರ ವಿಭಾಗದ ಪ್ರೊ.ಕಿಮ್ ನಾಲ್ಡರ್, ‘ತನ್ನ ಹೆಂಡತಿಯ ವೃತ್ತಿಜೀವನವನ್ನು ಬೆಂಬಲಿಸುವ ಸಲುವಾಗಿ ಗಂಡನೊಬ್ಬ ತನ್ನ ಉನ್ನತ ಅಧಿಕಾರದ ವೃತ್ತಿಜೀವನದಿಂದ ಹಿಂದೆ ಸರಿಯುವುದರ ಹಿಂದೆ ಸಾಕಷ್ಟು ಸಾಂಕೇತಿಕ ಅರ್ಥಗಳಿವೆ’ ಎಂದೂ ಅವರು ವಿಶ್ಲೇಷಿಸಿದ್ದಾರೆ.

ಜೋ ಬೈಡನ್ ಅವರೊಂದಿಗೆ ಆಪ್ತ ಸ್ನೇಹ ಸಂಬಂಧ ಹೊಂದಿರುವ ಎಮ್ಹಾಫ್‌, ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಬೈಡನ್ ಹಾಗೂ ಪತ್ನಿ ಕಮಲಾ ಹ್ಯಾರಿಸ್ ಪರ ನಿರಂತರವಾಗಿ ಪ್ರಚಾರ ಕೈಗೊಂಡಿದ್ದರು.

2013ರಲ್ಲಿ ಎಮ್ಹಾಫ್ ಮತ್ತು ಕಮಲಾ ಮೊದಲ ಬಾರಿಗೆ ಭೇಟಿಯಾಗಿದ್ದರು. ಇದಾದ ಒಂದು ವರ್ಷದ ನಂತರ ಇಬ್ಬರೂ ಮದುವೆಯಾದರು. ಕಮಲಾಗೆ ಇದು ಮೊದಲನೇ ವಿವಾಹವಾದರೆ, ಎಮ್ಹಾಫ್‌ಗೆ ಇದು ಎರಡನೇ ವಿವಾಹ. ಎಮ್ಹಾಫ್ ಅವರ ಮೊದಲ ಪತ್ನಿಯ ಮಕ್ಕಳು ಕಮಲಾ ಅವರನ್ನು ‘ಮೊಮಲಾ’ ಎಂದು ಕರೆಯುತ್ತಾರಂತೆ. ಯಿದ್ಧಿಷ್ ಭಾಷೆಯಲ್ಲಿ ಮೊಮಲಾ ಎಂದರೆ ಚಿಕ್ಕಮ್ಮ ಎಂದರ್ಥ.

ಮಿನ್ನೆಸೋಟದ ಸಂಸದೆ ಆಮಿ ಕ್ಲೋಬುಚಾರ್ ಅವರ ಪತಿ ಜಾನ್ ಬೆಸ್ಲರ್, ಕಮಲಾ ಹ್ಯಾರಿಸ್‌ಗಾಗಿ ತಮ್ಮ ವೃತ್ತಿ ಜೀವನ ತ್ಯಜಿಸಿ ಸಮಯ ಮೀಸಲಿಟ್ಟಿದ್ದಕ್ಕಾಗಿಎಮ್ಹಾಫ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

‘ಎಮ್ಹಾಫ್ ಅವರು ಆಧುನಿಕ ವ್ಯಕ್ತಿ. ಅವರು ಕಮಲಾ ಅವರನ್ನು ಎಷ್ಟೊಂದು ಬೆಂಬಲಿಸುತ್ತಾರೆ ಎನ್ನುವುದಕ್ಕೆ ಇದು ಉದಾಹರಣೆ’ ಎಂದೂ ವಕೀಲರೂ ಆಗಿರುವ ಜಾನ್ ಮೆಚ್ಚುಗೆ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT