ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವಿಟರ್ ಸಿಇಒ ಸ್ಥಾನದಿಂದ ಮಸ್ಕ್ ಕೆಳಗಿಳಿಯಬೇಕೇ?: ಗುಟೆರಸ್‌ ಹೇಳಿದ್ದೇನು?

Last Updated 20 ಡಿಸೆಂಬರ್ 2022, 3:00 IST
ಅಕ್ಷರ ಗಾತ್ರ

ಟ್ವಿಟರ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ಥಾನದಿಂದ ತಾನು ಕೆಳಗಿಳಿಯಬೇಕೇ ಅಥವಾ ಮುಂದುವರಿಯಬೇಕೇ ಎನ್ನುವ ಪ್ರಶ್ನೆಯನ್ನುಸಂಸ್ಥೆಯ ಸಿಇಒ ಇಲಾನ್ ಮಸ್ಕ್‌ ಅವರು ಬಳಕೆದಾರರ ಮುಂದಿಟ್ಟಿದ್ದರು.

ಈ ಕುರಿತು ವಿಶ್ವಸಂಸ್ಥೆಯಲ್ಲಿ ಸೋಮವಾರ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿರುವವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್‌ ಅವರು, 'ಟ್ವಿಟರ್‌ ಅನ್ನು ಯಾರು ನಿರ್ವಹಿಸುತ್ತಿದ್ದಾರೆ ಎನ್ನುವ ಬಗ್ಗೆ ನನಗೆ ವೈಯಕ್ತಿಯ ಅಭಿಪ್ರಾಯಗಳೇನೂ ಇಲ್ಲ. ಆದರೆ, ಆ ವೇದಿಕೆಯನ್ನು ಹೇಗೆ ನಿರ್ವಹಿಸಲಾಗುತ್ತದೆ ಎಂಬ ವಿಚಾರದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದೇನೆ' ಎಂದು ಹೇಳಿದ್ದಾರೆ.

ಎಲಾನ್‌ ಮಸ್ಕ್‌ ಅವರು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆದರಿಕೆ ಒಡ್ಡುತ್ತಿದ್ದಾರೆ ಎನಿಸುತ್ತದೆಯೇಎಂದೂ ಇದೇ ವೇಳೆ ಪತ್ರಕರ್ತರುಪ್ರಶ್ನಿಸಿದ್ದಾರೆ.

'ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ಬರುವುದು, ಪತ್ರಕರ್ತರು ತಮ್ಮ ಕೆಲಸ ಮಾಡಲು ಅವಕಾಶ ನೀಡದಿರುವುದು ಹಾಗೂ ಅದೇ ವೇಳೆ ದ್ವೇಷದ ಮಾತುಗಳು ಹೆಚ್ಚಾಗುವುದನ್ನು ನೋಡಿದರೆ ಆಘಾತವಾಗುತ್ತದೆ. ಹಾಗಾಗಿ, ಯಾವುದೇ ಸಾಮಾಜಿಕ ವೇದಿಕೆಯನ್ನು ಮುನ್ನಡೆಸುವವರಿಗೆ, ಧ್ವೇಷ ಭಾಷಣಗಳು, ಹೊಸ ಮಾದರಿಯ ನಾಜಿ ಮನಸ್ಥಿತಿ, ವರ್ಣ ಶ್ರೇಷ್ಠತೆ ಹಾಗೂ ಇನ್ನಿತರ ಉಗ್ರವಾದಗಳಿಗೆ ಅವಕಾಶವಿಲ್ಲ ಎಂಬುದನ್ನು ಹಾಗೂಅಭಿವ್ಯಕ್ತಿಸ್ವಾತಂತ್ರಕ್ಕೆ ಅವಕಾಶವಿದೆ, ವಿಶೇಷವಾಗಿ ಪತ್ರಕರ್ತರಿಗೆ ಅದು ಲಭ್ಯವಾಗುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಶಿಫಾರಸು ಮಾಡುತ್ತೇನೆ' ಎಂದು ಗೆಟೆರಸ್ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದ ದೈತ್ಯ ಟ್ವಿಟರ್‌ ಸಂಸ್ಥೆಯ ಸಿಇಒ ಮಸ್ಕ್‌ ಅವರು ಭಾನುವಾರ ಸಮೀಕ್ಷೆ ನಡೆಸಿದ್ದರು.ಸಮೀಕ್ಷೆಯ ಫಲಿತಾಂಶಕ್ಕೆ ಬದ್ಧವಾಗಿರುವುದಾಗಿಯೂ ಅವರು ಘೋಷಿಸಿದ್ದರು.

1.75 ಕೋಟಿಗೂ ಹೆಚ್ಚು ಬಳಕೆದಾರರು ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ. ಮಸ್ಕ್‌ ಸಿಇಒ ಸ್ಥಾನ ತೊರೆಯಬೇಕು ಎಂದು ಶೇ 57.5 ರಷ್ಟು ಬಳಕೆದಾರರು ಮತ ಚಲಾಯಿಸಿದರೆ, ಶೇ42.5ರಷ್ಟು ಬಳಕೆದಾರರು ಸಿಇಒ ಸ್ಥಾನ ತೊರೆಯಬಾರದು ಮತ ಹಾಕಿದ್ದಾರೆ. ಫಲಿತಾಂಶದ ಕುರಿತಂತೆಮಸ್ಕ್‌ ಈವರೆಗೆ ಯಾವುದೇ ನೀಡಿಲ್ಲ.

ಇಲಾನ್‌ ಮಸ್ಕ್ ವಿರುದ್ಧ ವರದಿ ಪ್ರಕಟಿಸಿದನ್ಯೂಯಾರ್ಕ್ ಟೈಮ್ಸ್‌, ವಾಷಿಂಗ್ಟನ್ ಪೋಸ್ಟ್‌, ಟೈಮ್ಸ್, ಸಿಎನ್‌ಎನ್‌ ಮುಂತಾದ ಮಾಧ್ಯಮ ಸಂಸ್ಥೆಗಳ ಹಲವು ಪತ್ರಕರ್ತರ ಖಾತೆಗಳನ್ನು ಟ್ವಿಟರ್‌ ಇತ್ತೀಚೆಗೆ ಅಮಾನತು ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT