ಬುಧವಾರ, ಜುಲೈ 28, 2021
29 °C
ಹೆಚ್ಚು ಖರೀದಿ ಮೂಲಕ ಪ್ರಜಾಪ್ರಭುತ್ವ, ಪತ್ರಿಕಾ ಸ್ವಾತಂತ್ರ್ಯ ಬೆಂಬಲಿಸಿದ ನಾಗರಿಕರು

ಹಾಂಗ್‌ಕಾಂಗ್‌ನಲ್ಲಿ ಸಂಪಾದಕರ ಬಂಧನ: ಪತ್ರಿಕೆಯ ಮುದ್ರಣ ಹೆಚ್ಚಳ

ಎಪಿ Updated:

ಅಕ್ಷರ ಗಾತ್ರ : | |

Prajavani

ಹಾಂಕ್‌ಗಾಂಗ್‌: ವಿದೇಶಿ ಶಕ್ತಿಗಳ ಜೊತೆ ಕೈಜೋಡಿಸಿದ ಆರೋಪದ ಮೇಲೆ ಐವರು ಸಂಪಾದಕರು ಮತ್ತು ಕಾರ್ಯ ನಿರ್ವಾಹಕರ ಬಂಧನವನ್ನು ಖಂಡಿಸಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪತ್ರಿಕೆಗಳನ್ನು ಖರೀದಿಸುವ ಮೂಲಕ ಪತ್ರಿಕಾ ಸ್ವಾತಂತ್ಯದ ಬೆಂಬಲಕ್ಕೆ ನಿಂತಿದ್ದಾರೆ. ಹೀಗಾಗಿ ಪ್ರಜಾಪ್ರಭುತ್ವ ಪರ ದಿನಪತ್ರಿಕೆ ‘ಆ್ಯಪಲ್ ಡೇಲಿ‘ ಶುಕ್ರವಾರ ಪತ್ರಿಕೆಯ ಮುದ್ರಣವನ್ನು 5 ಲಕ್ಷ ಪ್ರತಿಗಳಿಗೆ ಹೆಚ್ಚಿಸಿದೆ.

ರಾಷ್ಟ್ರೀಯ ಭದ್ರತಾ ಕಾಯ್ದೆಯನ್ವಯ ಪೊಲೀಸರು ಗುರುವಾರ ಐವರು ಸಂಪಾದಕರು ಮತ್ತು ಕಾರ್ಯ ನಿರ್ವಾಹಕರನ್ನು ಬಂಧಿಸಿದ್ದರು. ಇದೇ ಮೊದಲ ಬಾರಿಗೆ ಮಾಧ್ಯಮ ಪ್ರತಿನಿಧಿಗಳ ವಿರುದ್ಧ ಈ ಕಾಯ್ದೆಯನ್ನು ಬಳಸಲಾಗಿದೆ.

ಓದಿ: 

ವಿದೇಶಿ ಶಕ್ತಿಗಳೊಂದಿಗೆ ಕೈಜೋಡಿಸಿ, ರಾಷ್ಟ್ರೀಯ ಭದ್ರತೆಗೆ ಧಕ್ಕೆ ಉಂಟು ಮಾಡಿದ್ದಾರೆ ಎಂಬ ಶಂಕೆಯ ಮೇಲೆ ಹಾಗೂ ಪತ್ರಿಕೆಗಳಲ್ಲಿ ಪ್ರಕಟವಾಗಿರುವ 30 ಲೇಖನಗಳನ್ನು ಆಧರಿಸಿ ಸಂಪಾದಕರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಬರಹಗಳಲ್ಲಿ ಚೀನಾ ಮತ್ತು ಹಾಂಗ್ ಕಾಂಗ್ ವಿರುದ್ಧ ಅಂತರರಾಷ್ಟ್ರೀಯ ನಿರ್ಬಂಧಗಳನ್ನು ವಿಧಿಸಬೇಕೆಂಬ ಮಾಹಿತಿ ಇರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಸರ್ಕಾರಿ ವಿರೋಧಿ ಪ್ರತಿಭಟನೆಗಳು ಮೌನವಾಗುತ್ತಾ, ಹಾಂಗ್‌ಕಾಂಗ್‌ನಲ್ಲಿರುವ ಪ್ರಮುಖ ಪ್ರಜಾಪ್ರಭುತ್ವ ಪರ ಹೋರಾಟಗಾರರು ಜೈಲು ಸೇರಿದ್ದಾರೆ. ಇಲ್ಲಿನ ನಾಗರಿಕರು ತಮಗೆ ಅನುಕೂಲವಿರುವ ಅಂಗಡಿಗಳಿಂದ ಪತ್ರಿಕೆಗಳನ್ನು ಖರೀದಿಸಿ ಓದಲು ಆರಂಭಿಸಿದರು.

‘ಹಾಂಗ್‌ಕಾಂಗ್‌ನಲ್ಲಿ ಈಗಾಗಲೇ ಸಾಕಷ್ಟು ಅನ್ಯಾಯಗಳು ನಡೆಯುತ್ತಿವೆ. ನಾವು ಇನ್ನು ಮುಂದೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಭಾವಿಸುತ್ತೇನೆ‘ ಎಂದು ನಿವಾಸಿ ಲಿಸಾ ಚೆಯುಂಗ್ ಹೇಳಿದರು.

ಓದಿ: 

‘ಪತ್ರಿಕೆಗಳನ್ನು ಖರೀದಿಸುವ ಮೂಲಕ ಪತ್ರಿಕಾ ಸ್ವಾತಂತ್ರ್ಯವನ್ನು ಬೆಂಬಲಿಸುವುದನ್ನು ಬಿಟ್ಟರೆ, ನಮಗೆ ಬೇರೇನೂ ಮಾಡಲು ಸಾಧ್ಯವಿಲ್ಲ. ಕಾನೂನಿನಿಂದ ಹಾಂಗ್‌ಕಾಂಗ್‌ ಜನರನ್ನು ರಕ್ಷಿಸಲು ಸಾಧ್ಯವಾಗದಿದ್ದಾಗ, ನಮಗೆ ಆಗುವ ಕೆಲಸವನ್ನು ಮಾತ್ರ ನಾವು ಮಾಡಬಹುದು‘ ಎಂದು ಚೆಯುಂಗ್ ಹೇಳಿದರು.  ಮತ್ತೊಬ್ಬ ನಿವಾಸಿ ವಿಲಿಯಮ್ ಚಾನ್‌, ಪತ್ರಿಕೆಗಳನ್ನು ಖರೀದಿಸುವ ಮೂಲಕ ಪ್ರಜಾಪ್ರಭುತ್ವ ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.

ಶುಕ್ರವಾರದ ಆವೃತ್ತಿಯ ಮೊದಲ ಪುಟದಲ್ಲಿ ಐವರು ಸಂಪಾದಕರು ಮತ್ತು ಕಾರ್ಯನಿರ್ವಾಹಕರ ಚಿತ್ರಗಳನ್ನು ದೊಡ್ಡದಾಗಿ ಮುದ್ರಿಸಲಾಗಿದೆ. ಮೊನ್ನೆ ನಡೆದ ದಾಳಿಯಲ್ಲಿ ಪೊಲೀಸರು ಪತ್ರಿಕಾಲಯದಿಂದ 44 ಹಾರ್ಡ್ ಡ್ರೈವ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು