ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕವನಾಗಿದ್ದಾಗ ಜನಾಂಗೀಯ ತಾರತಮ್ಯ ಅನುಭವಿಸಿದ್ದೆ: ರಿಷಿ ಸುನಕ್‌

Last Updated 3 ಡಿಸೆಂಬರ್ 2022, 1:18 IST
ಅಕ್ಷರ ಗಾತ್ರ

ಲಂಡನ್‌: ‘ಬ್ರಿಟನ್‌ನಲ್ಲಿ ನಾನೂ ಜನಾಂಗೀಯ ತಾರತಮ್ಯ ಅನುಭವಿಸಿದ್ದೆ. ಆದರೆ ಇಂಥ ಸಮಸ್ಯೆಯನ್ನು ಎದುರಿಸಲು ಅಗತ್ಯವಿರುವ ಅಸಾಧಾರಣ ಪ್ರಗತಿಯನ್ನುದೇಶವು ಸಾಧಿಸಿದೆ’ ಎಂದು ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಹೇಳಿದ್ದಾರೆ.

ಬಕ್ಕಿಂಗ್‌ಹ್ಯಾಮ್‌ ಅರಮನೆಯಲ್ಲಿ ಉದ್ಭವಿಸಿರುವ ವರ್ಣಭೇದ ನೀತಿ ಸಮಸ್ಯೆ ಬೆನ್ನಲ್ಲೇ ಗುರುವಾರ ರಾತ್ರಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಅರಮನೆಯ ಆಂತರಿಕ ವಿಚಾರದ ಬಗ್ಗೆ ಮಾತನಾಡುವುದಿಲ್ಲ. ಆದರೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು.

‘ನಾನು ಚಿಕ್ಕವನಾಗಿದ್ದಾಗ ಜನಾಂಗೀಯ ತಾರತಮ್ಯ ಅನುಭಸಿದ್ದೆ. ಆದರೆ ಈಗಲೂ ಈ ಸಮಸ್ಯೆ ಇದೆ ಎಂದು ಭಾವಿಸುವುದಿಲ್ಲ. ಏಕೆಂದರೆ ಇಂಥ ಸಮಸ್ಯೆ ವಿರುದ್ಧ ಹೋರಾಡಲು ದೇಶವು ಅಸಾಧಾರಣ ಪ್ರಗತಿ ಸಾಧಿಸಿದೆ.ಹಾಗಂತ ನಮ್ಮ ಜವಾಬ್ದಾರಿ ಪೂರ್ಣಗೊಂಡಿಲ್ಲ. ಎಲ್ಲಿ ಇಂಥ ತಾರತಮ್ಯ ಕಂಡರೂ ಅದನ್ನು ಖಂಡಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT