ಇಸ್ಲಾಮಾಬಾದ್: ಪಾಕಿಸ್ತಾನದ ಜನರ ದಾರಿತಪ್ಪಿಸುತ್ತಿದ್ದ ಕಾರಣಕ್ಕೆ ಇಮ್ರಾನ್ ಖಾನ್ ಅವರನ್ನು ಕೊಲ್ಲಲು ಯತ್ನಿಸಿದೆ ಎಂದು, ದಾಳಿಕೋರ ಪೊಲೀಸರ ಎದುರು ಹೇಳಿಕೆ ನೀಡಿದ್ದಾನೆ.
ರಾಜಕೀಯ ರ‍್ಯಾಲಿಯಲ್ಲಿ ಭಾಗವಹಿಸಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಮೇಲೆ ಗುರುವಾರ ಸಂಜೆ ಗುಂಡು ಹಾರಿಸಲಾಗಿದೆ. ಗುಜ್ರಾನ್‌ವಾಲಾ ನಗರದ, ಅಲ್ಲಾಹ್‌ವಾಲ ಚೌಕ್ ಬಳಿ ರ‍್ಯಾಲಿ ಸಾಗುತ್ತಿದ್ದ ವೇಳೆ ಇಮ್ರಾನ್ ಅವರ ಮೇಲೆ ದಾಳಿ ನಡೆದಿತ್ತು. ಅವರ ಕಾಲಿಗೆ ಗುಂಡೇಟು ಬಿದ್ದಿದ್ದರೂ, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅವರ ಸಹಾಯಕರು ಹೇಳಿದ್ದಾರೆ.
‘ಸಿರ್ಫ್ ಇಮ್ರಾನ್ ಖಾನ್ ಕೋ ಮಾರ್ನಾ ಥಾ (ನಾನು ಇಮ್ರಾನ್ ಖಾನ್ ಅವರನ್ನು ಕೊಲ್ಲಲು ಮಾತ್ರ ಬಂದಿದ್ದೆ)’ ಎಂದು ಆರೋಪಿ ಶೂಟರ್ ಕ್ಯಾಮೆರಾ ಎದುರು ನಿಂತು ಹೇಳಿಕೆ ದಾಖಲಿಸಿದ್ದಾನೆ.
ಗುಜ್ರಾನ್‌ವಾಲಾಗೆ ಬೈಕ್‌ನಲ್ಲಿ ಬಂದಿದ್ದೆ. ವಾಹನವನ್ನು ತಮ್ಮ ಸೋದರ ಸಂಬಂಧಿ ಮನೆ ಬಳಿ ಬಿಟ್ಟಿದ್ದೆ ಎಂದು ಆತ ಹೇಳಿಕೊಂಡಿದ್ದಾನೆ.
ಇಬ್ಬರು ಶೂಟರ್‌ಗಳು ಇಮ್ರಾನ್ ಮೇಲೆ ದಾಳಿ ನಡೆಸಿದ್ದರು ಎಂದು ವರದಿಗಳು ಹೇಳಿವೆ. ಒಬ್ಬನ ಬಳಿ ಪಿಸ್ತೂಲ್ ಇತ್ತು ಎನ್ನಲಾಗಿದ್ದು, ಮತ್ತೊಬ್ಬನ ಬಳಿ ಸ್ವಯಂಚಾಲಿತ ರೈಫಲ್ ಇತ್ತು ಎಂದು ಹೇಳಲಾಗಿದೆ.
ಇವುಗಳನ್ನೂ ಓದಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.