ಮಂಗಳವಾರ, ಫೆಬ್ರವರಿ 7, 2023
27 °C

ಹತ್ಯೆ ಸಂಚಿನ ಬಗ್ಗೆ ಮೊದಲೇ ಅರಿವಿತ್ತು, 4 ಬಾರಿ ಗುಂಡಿನ ದಾಳಿ: ಇಮ್ರಾನ್ ಖಾನ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಾಹೋರ್‌: ‘ದುಷ್ಕರ್ಮಿಗಳು ತಮ್ಮ ಬಲಗಾಲಿಗೆ ನಾಲ್ಕು ಬಾರಿ ಗುಂಡು ಹಾರಿಸಿದ್ದಾರೆ’ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್ ಶುಕ್ರವಾರ ತಿಳಿಸಿದರು.

ಹತ್ಯೆ ಯತ್ನ ನಡೆದ ನಂತರ ಮೊದಲ ಬಾರಿಗೆ ದೇಶವನ್ನು ಉದ್ದೇಶಿಸಿ ಆಸ್ಪತ್ರೆಯಿಂದಲೇ ಮಾತನಾಡಿದ ಅವರು, ‘ಹತ್ಯೆಯ ಸಂಚಿನ ಬಗ್ಗೆ ನನಗೆ ಮೊದಲೇ ಅರಿವಿತ್ತು’ ಎಂದು ತಿಳಿಸಿದರು.

‘ದಾಳಿಯ ವಿವರವನ್ನು ನಂತರ ನೀಡುತ್ತೇನೆ. ವಾಜೀರಾಬಾದ್‌ನಲ್ಲಿ ನನ್ನನ್ನು ಕೊಲ್ಲಲು ಅವರು ಯೋಜಿಸಿದ್ದರು ಎಂಬುದು ದಾಳಿಯ ಹಿಂದಿನ ದಿನವೇ ತಿಳಿದಿತ್ತು’ ಎಂದು ತಿಳಿಸಿದ್ದಾರೆ.

 ‘ಖಾನ್‌ ಅವರ ಬಲಗಾಲಿನ ಮೂಳೆಗೆ ಹಾನಿಯಾಗಿದೆ’ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ.ಫೈಸಲ್‌ ಸುಲ್ತಾನ್ ತಿಳಿಸಿದ್ದಾರೆ.

ಇವನ್ನೂ ಓದಿ...

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು