ಶುಕ್ರವಾರ, ಜುಲೈ 1, 2022
26 °C

ಸಂಧಾನಕ್ಕೆ ಸಿದ್ಧ, ವಿಫಲಗೊಂಡರೆ 3ನೇ ವಿಶ್ವಯುದ್ಧ: ಝೆಲೆನ್‌ಸ್ಕಿ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಕೀವ್‌: 'ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಜೊತೆ ಸಂಧಾನಕ್ಕೆ ಸಿದ್ಧನಿದ್ದೇನೆ. ಆದರೆ ಸಂಧಾನಕಾರರ ಪ್ರಯತ್ನ ವಿಫಲಗೊಂಡರೆ 3ನೇ ವಿಶ್ವಯುದ್ಧವೆಂದೇ ಅರ್ಥ' ಎಂದು ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಹೇಳಿದ್ದಾರೆ.

ಈ ಕುರಿತು ಉಕ್ರೇನ್‌ನ ಮಾಧ್ಯಮ 'ದಿ ಕೀವ್‌ ಇಂಡಿಪೆಂಡೆಂಟ್‌' ತಿಳಿಸಿರುವುದಾಗಿ ಸುದ್ದಿ ಸಂಸ್ಥೆ 'ಎಎನ್‍‌ಐ' ಟ್ವೀಟ್‌ ಮಾಡಿದೆ.

‘ಕಲಾ ಶಾಲೆಯ ಮೇಲೆ ರಷ್ಯಾದ ಸೇನೆ ಬಾಂಬ್ ದಾಳಿ ನಡೆಸಿದೆ. ರಷ್ಯಾದ ಪಡೆಗಳು ನಿರಂತರ ಆಕ್ರಮಣದಲ್ಲಿ ಯುದ್ಧಾಪರಾಧಗಳನ್ನು ಎಸಗುತ್ತಿದ್ದು, ರಷ್ಯಾವು ಇತಿಹಾಸದ ಪುಟದಲ್ಲಿ ಅಧೋಗತಿಗೆ ಇಳಿಯಲಿದೆ’ ಎಂದು ಝೆಲೆನ್‌ಸ್ಕಿ ಆಕ್ರೋಶ ಹೊರಹಾಕಿದ್ದಾರೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು