ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ| ಫೋರ್ಟ್ ಬೆಂಡ್ ಕೌಂಟಿ ಜಡ್ಜ್‌ ಆಗಿ ಭಾರತ ಮೂಲದ ಕೆ.ಪಿ.ಜಾರ್ಜ್ ಮರು ಆಯ್ಕೆ

Last Updated 13 ನವೆಂಬರ್ 2022, 13:00 IST
ಅಕ್ಷರ ಗಾತ್ರ

ಹೂಸ್ಟನ್‌:ಭಾರತ ಮೂಲದ ಅಮೆರಿಕನ್ನರಾದ, ಡೆಮಾಕ್ರಟಿಕ್‌ ಪಕ್ಷದ ಕೆ.ಪಿ.ಜಾರ್ಜ್ ಅವರು ಫೋರ್ಟ್‌ ಬೆಂಡ್ ಕೌಂಟಿ ನ್ಯಾಯಮೂರ್ತಿಯಾಗಿ ಮತ್ತೊಂದು ಅವಧಿಗೆ ಆಯ್ಕೆಯಾಗಿದ್ದಾರೆ.

57 ವರ್ಷದ ಜಾರ್ಜ್ ಅವರು ಚಲಾಯಿತ ಒಟ್ಟು ಮತಗಳಲ್ಲಿಶೇ 52ರಷ್ಟು ಮತ ಪಡೆದು ಆಯ್ಕೆಯಾದರು. ರಿಪಬ್ಲಿಕನ್‌ ಪಕ್ಷದ ಟ್ರೆವೆರ್ ನೆಹ್ಲ್‌ ಪ್ರತಿಸ್ಪರ್ಧಿಯಾಗಿದ್ದರು.

‘ಫೋರ್ಟ್‌ ಬೆಂಡ್ ಕೌಂಟಿಯ ಮತದಾರರು ತೀರ್ಪು ನೀಡಿದ್ದಾರೆ. ಇದೊಂದು ಪ್ರಭಾವಿ ಸ್ಥಾನ. ಪ್ರಜಾಪ್ರಭುತ್ವದ ಗೆಲುವು. ಇದನ್ನು ಗೌರವಿಸುತ್ತೇನೆ’ ಎಂದು ಜಾರ್ಜ್ ಮರು ಆಯ್ಕೆ ಬಳಿಕ ಪ್ರತಿಕ್ರಿಯಿಸಿದರು.

ಅಮೆರಿಕದಲ್ಲಿ ಕೌಂಟಿ ಜಡ್ಜ್‌ಗಳ ಕಾರ್ಯವ್ಯಾಪ್ತಿಯು ರಾಜ್ಯದಿಂದ ರಾಜ್ಯಕ್ಕೆ ಅದರ ವಿಸ್ತೀರ್ಣವನ್ನು ಆಧರಿಸಿ ಭಿನ್ನವಾಗಿರುತ್ತದೆ. ಜಡ್ಜ್‌ಗಳು ವಿಸ್ತ್ರತವಾಗಿ ನ್ಯಾಯಾಂಗ ಮತ್ತು ಆಡಳಿತ ಹೊಣೆಗಾರಿಕೆಯನ್ನು ನಿಭಾಯಿಸುವರು.

ಜಾರ್ಜ್ ಅವರು ಮೂಲತಃ ಕೇರಳದ ಪತ್ತನಂತಿಟ್ಟಾ ಬಳಿಯ ಕೊಕ್ಕತೋಡು ಗ್ರಾಮದವರು. ಪದವಿ ಶಿಕ್ಷಣದ ಬಳಿಕ ಉದ್ಯೋಗ ಅರಸಿ ಮುಂಬೈಗೆ ತೆರಳಿದರು. ಹಣಕಾಸು ಸಂಸ್ಥೆಯ ಉದ್ಯೋಗಿಯಾಗಿ1993ರಲ್ಲಿ ನ್ಯೂಯಾರ್ಕ್‌ಗೆ ತೆರಳಿದರು. ಅಂದಿನಿಂದ ಕುಟುಂಬದೊಂದಿಗೆ ಅಲ್ಲಿಯೇ ನೆಲೆಸಿದ್ದಾರೆ. ಅಮೆರಿಕದ ಈ ಪ್ರಮುಖ ಸ್ಥಾನಕ್ಕೆ ಏರಿದ ಭಾರತ ಮೂಲದ ಅಮೆರಿಕ ಸಮುದಾಯದ ಮೊದಲಿಗರು ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT