ಶನಿವಾರ, ಆಗಸ್ಟ್ 13, 2022
26 °C

ಸಿಎನ್‌ಎನ್‌ ವಿರುದ್ಧ ಕಶ್ ಪಟೇಲ್‌ ಮಾನನಷ್ಟ ಮೊಕದ್ದಮೆ ದಾಖಲು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಭಾರತ ಸಂಜಾತ ಅಮೆರಿಕದ ಉನ್ನತ ಅಧಿಕಾರಿ ಕಶ್‌ ಪಟೇಲ್‌ (ಕಶ್ಯಪ್‌ ಪಟೇಲ್‌) ಅವರು ಸಿಎನ್‌ಎನ್‌ ಸುದ್ದಿ ಸಂಸ್ಥೆ ವಿರುದ್ಧ ವರ್ಜಿನಿಯಾ ನ್ಯಾಯಾಲಯದಲ್ಲಿ ಕಳೆದ ಶುಕ್ರವಾರ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಅವರು ₹367 ಕೋಟಿ (50 ಮಿಲಿಯನ್‌ ಡಾಲರ್‌) ಪರಿಹಾರ ಕೋರಿದ್ದಾರೆ.

ಸಿಎನ್‌ಎನ್‌ ಸುದ್ದಿ ಸಂಸ್ಥೆಯು ಸುಳ್ಳು ಮತ್ತು ಮಾನಹಾನಿಕರ ಸರಣಿ ಹೇಳಿಕೆಗಳನ್ನು ಪ್ರಕಟಿಸುವ ಮೂಲಕ ತನ್ನ ವ್ಯಕ್ತಿತ್ವಗೆ ಚ್ಯುತಿ ತರುವ ಪ್ರಯತ್ನ ಮಾಡಿದೆ ಎಂದು ಆರೋಪಿಸಿ ಕಶ್‌ ಪಟೇಲ್‌ ಅವರು ಸಿಎನ್‌ಎನ್‌ ಮತ್ತು ಅದರ ಹಲವು ವರದಿಗಾರರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಈ ಬಗ್ಗೆ ಫಾಕ್ಸ್‌ ನ್ಯೂಸ್‌ ವರದಿ ಮಾಡಿದೆ.

ಕಶ್ ಪಟೇಲ್ ಅವರು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಕ್ರಿಸ್‌ ಮಿಲ್ಲರ್‌ ಅವರ ಸಿಬ್ಬಂದಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಅವರು ಶ್ವೇತಭವನದಲ್ಲಿ ಕೆಲಸ ಮಾಡುತ್ತಿದ್ದರು.

‘ನಾನು ಶ್ವೇತಭವನದಿಂದ ಪೆಂಟಗನ್‌ನಲ್ಲಿ (ಅಮೆರಿಕದ ರಕ್ಷಣಾ ಇಲಾಖೆಯ ಮುಖ್ಯಕಚೇರಿ) ಸೇರ್ಪಡೆಯಾಗುವ ಮುನ್ನ ನವೆಂಬರ್‌ 24 ರಿಂದ ಡಿಸೆಂಬರ್‌ 4ರ ತನಕ ಸಿಎನ್‌ಎನ್‌ ತನ್ನ ವಿರುದ್ಧ ಸರಣಿ ಲೇಖನಗಳನ್ನು ಪ್ರಕಟಿಸಿತ್ತು. ಈ ಲೇಖನವು ಸುಳ್ಳು ಮತ್ತು ಮಾನಹಾನಿಕರ ಹೇಳಿಕೆಗಳನ್ನು ಒಳಗೊಂಡಿದ್ದವು’ ಎಂದು ಮಾನನಷ್ಟ ಮೊಕದ್ದಮೆಯಲ್ಲಿ ಹೇಳಲಾಗಿದೆ ಎಂದು ಫಾಕ್ಸ್‌ ನ್ಯೂಸ್‌ ವರದಿಯಲ್ಲಿ ಹೇಳಿವೆ.

ಈ ಹಿಂದೆ ಕ್ಯಾಲಿಫೋರ್ನಿಯಾದ ರಿಪಬ್ಲಿಕನ್ ಪ್ರತಿನಿಧಿ ಡೆವಿನ್ ನುನೆಸ್ ಅವರ ಉನ್ನತ ಸಹಾಯಕರಾಗಿದ್ದ ಕಶ್‌ ಪಟೇಲ್ ಅವರು ಟ್ರಂಪ್ ಪರ ಪಿತೂರಿ ಸಿದ್ಧಾಂತಿ ಎಂದು ಸಿಎನ್ಎನ್ ಪ್ರಕಟಿಸಿದ ಲೇಖನದಲ್ಲಿ ಹೇಳಲಾಗಿತ್ತು ಎಂದು ವರದಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು