ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಅಧ್ಯಕ್ಷೀಯ ಚುನಾವಣೆ: ಭಾರತೀಯರ ಮತಬೇಟೆಗೆ ಬಾಲಿವುಡ್‌ ಸಂಗೀತ ಬಳಕೆ

Last Updated 21 ನವೆಂಬರ್ 2020, 11:54 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ವೇಳೆ ಆ ದೇಶದಲ್ಲಿ ನೆಲೆಸಿರುವ ಭಾರತೀಯ ಮತದಾರರನ್ನು ಸೆಳೆಯಲು ಡೆಮಾಕ್ರಟಿಕ್‌ ಪಕ್ಷದ ಜೋ ಬೈಡನ್‌ ಮತ್ತು ಕಮಲಾ ಹ್ಯಾರಿಸ್‌ ಅವರ ಬೆಂಬಲಿಗರು ಬಾಲಿವುಡ್‌ ಸಂಗೀತದ ಮೊರೆ ಹೋಗಿದ್ದರಂತೆ.

ಬೈಡನ್‌–ಕಮಲಾ ಅವರ ಪರ ಪ್ರಚಾರ ನಡೆಸಿದ್ದ ಉದ್ಯಮಿ ಅಜಯ್‌ ಜೈನ್‌ ಭುಟೋರಿಯಾ ಅವರು ಶನಿವಾರ ಈ ವಿಷಯ ತಿಳಿಸಿದ್ದಾರೆ.

‘ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬ ದೂರುಗಳು ಕೇಳಿಬಂದಿದ್ದವು. ಅವರ ಭಾಷೆಯಲ್ಲೇ ಮತ ಯಾಚಿಸಲು ಎಂದಾದರೂ ಪ್ರಯತ್ನಿಸಿದ್ದಿರಾ ಎಂದು ನಾನು ಕೆಲವರನ್ನು ಪ್ರಶ್ನಿಸಿದ್ದೆ. ಪ್ರಚಾರ ತಂಡದ ಸದಸ್ಯರು ಮತದಾರರನ್ನು ಭೇಟಿಯಾದಾಗ ಅವರ ಭಾಷೆಯಲ್ಲೇ ಮಾತನಾಡಿಸಬೇಕು. ತಮ್ಮ ಅಭ್ಯರ್ಥಿ ಪರ ಮತ ಚಲಾಯಿಸುವಂತೆ ಮನವೊಲಿಸಬೇಕು. ಆಗ ಅವರು ಸಹಜವಾಗಿಯೇ ನಮ್ಮ ಪರ ಒಲವು ತೋರುತ್ತಾರೆ’ ಎಂದು ಅಜಯ್‌ ಜೈನ್‌ ಹೇಳಿದ್ದಾರೆ.

ಅಜಯ್‌ ಅವರು ಚುನಾವಣೆಯ ವೇಳೆ ಭಾರತದ ಒಟ್ಟು14 ಭಾಷೆಗಳಲ್ಲಿ ಘೋಷಣಾ ವಾಕ್ಯಗಳನ್ನು ಸಿದ್ಧಪಡಿಸಿದ್ದರು.

‘ಅಮೆರಿಕ ಕಾ ನೇತಾ ಕೈಸಾ ಹೋ; ಜೊ ಬೈಡನ್‌ ಜೈಸಾ ಹೋ’, ‘ಟ್ರಂಪ್‌ ಹಠಾವೊ ಅಮೆರಿಕ ಬಚಾವೊ’, ‘ಬೈಡನ್‌–ಹ್ಯಾರಿಸ್‌ ಕೋ ಜಿತಾವೊ, ಅಮೆರಿಕಾ ಕೋ ಆಗೆ ಬಡಾವೊ’, ‘ಜಾಗೋ ಅಮೆರಿಕ ಜಾಗೋ–ಬೈಡನ್‌ ಹ್ಯಾರಿಸ್‌ ಕೋ ವೋಟ್‌ ದೋ’.. ಇವು ಅಜಯ್‌ ರಚಿಸಿದ್ದ ಪ್ರಮುಖ ಘೋಷಣಾ ವಾಕ್ಯಗಳಾಗಿವೆ.

‘ಚುನಾವಣೆಯಲ್ಲಿ ಅಭ್ಯರ್ಥಿ ಗೆಲ್ಲಬೇಕಾದರೆ ಒಂದೊಂದು ಮತವೂ ಬಹಳ ಮುಖ್ಯ. ಹೀಗಾಗಿಯೇ ಎಲ್ಲಾ ವರ್ಗದ ಜನರನ್ನು ತಲುಪಲು ನಾವು ವಿಶಿಷ್ಟ ತಂತ್ರ ರೂಪಿಸಿದ್ದೆವು. ಅವರ ಭಾಷೆಯಲ್ಲೇ ಮತ ಯಾಚಿಸುವ ಮೂಲಕ ಮತದಾರರಿಗೆ ಹತ್ತಿರವಾಗಲು ಪ್ರಯತ್ನಿಸಿದ್ದೆವು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT