ಪೆಂಗ್ವಿನ್ ಸಂಸ್ಥೆಯ ಮಧ್ಯಂತರ ಸಿಇಒ ಆಗಿ ಭಾರತ ಮೂಲದ ನಿಹಾರ್ ಮಾಳವೀಯ ಆಯ್ಕೆ

ನ್ಯೂಯಾರ್ಕ್: ಭಾರತ ಮೂಲದ ನಿಹಾರ್ ಮಾಳವೀಯ (48) ಅವರು ನ್ಯೂಯಾರ್ಕ್ ಮೂಲದ ಅಂತರರಾಷ್ಟ್ರೀಯ ಮಟ್ಟದ ಪ್ರಕಾಶಕ ಸಂಸ್ಥೆ ಪೆಂಗ್ವಿನ್ ರಾಂಡಮ್ ಹೌಸ್‌ನ ಮಧ್ಯಂತರ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಆಗಿ ನೇಮಕರಾಗಿದ್ದಾರೆ.
ಈಗಿನ ಸಿಇಒ ಮಾರ್ಕಸ್ ದೊಹ್ಲೆ ಅವರು ಸಿಇಒ ಸ್ಥಾನದಿಂದ ಕೆಳಗಿಳಿಯುವುದಾಗಿ ಘೋಷಿಸಿದ ಬಳಿಕ ಪೆಂಗ್ವಿನ್ ಸಂಸ್ಥೆ ಈ ನಿರ್ಧಾರವನ್ನು ಘೋಷಿಸಿದೆ.
ನಿಹಾರ್ ಅವರು ಪೆಂಗ್ವಿನ್ ರಾಂಡಮ್ ಹೌಸ್ ಪ್ರಕಾಶನದ ಅಮೆರಿಕ ವಿಭಾಗದ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯಾಚರಣೆ ಅಧಿಕಾರಿಯಾಗಿ (ಸಿಒಒ) 2019ರಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಧ್ಯಂತರ ಸಿಇಒ ಆಗಿ ಅವರು 2023ರ ಜನವರಿ 1ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಪೆಂಗ್ವಿನ್ ಸಂಸ್ಥೆಯ ಮಾತೃಸಂಸ್ಥೆಯಾದ ಬರ್ಟಲ್ಸ್‌ಮನ್ ಪ್ರಕಟಣೆಯಲ್ಲಿ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.