ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯಾಣಿಕ ಸಾವು: ದೆಹಲಿಯಿಂದ ದೋಹಾಗೆ ಹೊರಟಿದ್ದ ವಿಮಾನ ಕರಾಚಿಯಲ್ಲಿ ಲ್ಯಾಂಡ್‌

ಕರಾಚಿಯಿಂದ ಪುನಃ ದೆಹಲಿಗೆ ಮರಳಿದ ವಿಮಾನ
Last Updated 13 ಮಾರ್ಚ್ 2023, 6:19 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿಯಿಂದ ದೋಹಾಗೆ ಹೊರಟಿದ್ದ ಇಂಡಿಗೋ ವಿಮಾನವೊಂದು ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಪ್ರಯಾಣಿಕರೊಬ್ಬರು ಅಸ್ವಸ್ಥರಾದ ಕಾರಣ ವಿಮಾನ ಕರಾಚಿಯಲ್ಲಿ ಲ್ಯಾಂಡ್‌ ಆಗಿದೆ.

ದುರ್ದೈವವಶಾತ್‌ ಲ್ಯಾಂಡ್‌ ಆಗುವ ಹೊತ್ತಿಗೆ ಪ್ರಯಾಣಿಕ ಕೊನೆಯುಸಿರೆಳೆದಿದ್ದಾರೆ.

ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಇಂಡಿಗೋ, ಪ್ರಯಾಣಿಕರೊಬ್ಬರು ಕುಸಿದು ಬಿದ್ದಿದ್ದರಿಂದ ವಿಮಾನವನ್ನು ಕರಾಚಿಗೆ ತಿರುಗಿಸಲಾಯ್ತು. ಆದರೆ ಲ್ಯಾಂಡ್‌ ಆಗುವ ವೇಳೆಯೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯಕೀಯ ತಂಡ ಘೋಷಣೆ ಮಾಡಿತು ಎಂದು ಹೇಳಿದೆ.

ಮೃತ ಪ್ರಯಾಣಿಕನ ದೇಹದೊಂದಿಗೆ ವಿಮಾನ ಮರಳಿ ದೆಹಲಿಗೆ ಬಂದಿದೆ. ಪ್ರಯಾಣಿಕನ ಜೀವ ಉಳಿಸುವ ಸಲುವಾಗಿ ಕರಾಚಿಯಲ್ಲಿ ತುರ್ತು ಲ್ಯಾಂಡ್‌ ಮಾಡಲಾಯ್ತು ಎಂದು ವಿಮಾನ ಸಂಸ್ಥೆ ಹೇಳಿದೆ.

‌‘ಈ ಸುದ್ದಿಯಿಂದ ನಮಗೆ ಬೇಸರವಾಗಿದೆ. ಮೃತರ ಕುಟುಂಬ ಹಾಗೂ ಸ್ನೇಹವರ್ಗದ ಜತೆ ನಮ್ಮ ಸಾಂತ್ವನ ಇದೆ. ಸದ್ಯ ಇತರ ಪ್ರಯಾಣಿಕರನ್ನು ಕಳುಹಿಸುವ ವ್ಯವಸ್ಥೆ ಮಾಡುತ್ತಿದ್ದೇವೆ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಂಪ‍ರ್ಕದಲ್ಲಿ ಇದ್ದೇವೆ‘ ಎಂದು ಇಂಡಿಗೋ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT