ಸೋಮವಾರ, ಮಾರ್ಚ್ 27, 2023
29 °C

ಇಂಡೋನೇಷ್ಯಾ: ಬೂಸ್ಟರ್‌ ಡೋಸ್ ನೀಡಲು ಯೋಜನೆ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಜಕಾರ್ತ, ಇಂಡೋನೇಷ್ಯಾ: ಶೇ 50ರಷ್ಟು ಜನರು ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಂಡ ನಂತರ ಅವರಿಗೆ ಬೂಸ್ಟರ್‌ ಡೋಸ್‌ಗಳನ್ನು ನೀಡಲು ಇಂಡೋನೇಷ್ಯಾ ಯೋಜನೆ ರೂಪಿಸಿದೆ ಎಂದು ಆರೋಗ್ಯ ಸಚಿವ ಬುಡಿ ಗುನಾದಿ ಸಾದಿಕಿನ್‌ ಸೋಮವಾರ ಹೇಳಿದ್ದಾರೆ.

ಮುಂದಿನ ತಿಂಗಳ ಅಂತ್ಯದಲ್ಲಿ ಇದು ಆರಂಭವಾಗಬಹುದು ಎಂದೂ ಅವರು ಸಂಸತ್ತಿನಲ್ಲಿ ಹೇಳಿದರು. 

ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಜಗತ್ತಿನ ನಾಲ್ಕನೇ ದೇಶ ಮತ್ತು ಏಷ್ಯಾದ ಕೋವಿಡ್‌ ಪಿಡುಗಿನ ಕೇಂದ್ರಬಿಂದುವಾಗಿರುವ ಇಂಡೋನೇಷ್ಯಾ ಶೇ 29ರಷ್ಟು ಜನರಿಗೆ ಲಸಿಕೆ ನೀಡಿದೆ. 

ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು. ಸರ್ಕಾರದಿಂದ ವಿಮೆ ಮಾಡಿಸಿಕೊಂಡ ಹಿರಿಯ ನಾಗರಿಕರಿಗೆ ಮತ್ತು ಬಡವರಿಗೆ ಮೊದಲ ಆದ್ಯತೆ ನೀಡಲಾಗುವುದು. ಉಳಿದವರು ಲಸಿಕೆಗೆ ಹಣ ಪಾವತಿಸಬೇಕು. ಆರೋಗ್ಯ ಕಾರ್ಯಕರ್ತರು ಈಗಾಗಲೇ ಲಸಿಕೆ ಪಡೆದಿದ್ದಾರೆ ಎಂದು ಬುಡಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು