ಬೈರೂತ್: ಜಾಗತಿಕ ಕುಖ್ಯಾತ ಉಗ್ರಗಾಮಿ ಸಂಘಟನೆ ಐಸಿಸ್ (ISIS) ಮುಖ್ಯಸ್ಥಅಬು ಹಸನ್ ಅಲ್-ಹಶಿಮಿ ಅಲ್-ಖುರೇಶಿ ಸತ್ತಿದ್ದಾನೆ ಎಂದು ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸ್ವತಃಐಸಿಸ್‌ನ ವಕ್ತಾರ ಈ ಸುದ್ದಿಯನ್ನು ಖಚಿತಪಡಿಸಿದ್ದಾನೆ ಎಂಬುದು ತಿಳಿದು ಬಂದಿದೆ.
‘ದೇವರ ಶತ್ರುಗಳೊಂದಿಗಿನ ಸೆಣಸಾಟದಲ್ಲಿಅಬು ಹಸನ್ ಅಲ್-ಹಶಿಮಿ ಅಲ್-ಖುರೇಶಿ ಸಾವನ್ನಪ್ಪಿದರು’ ಎಂದು ಐಸಿಸ್‌ನ ವಕ್ತಾರ ಹಾಶ್ಮಿ ಆಡಿಯೊ ಸಂದೇಶದಲ್ಲಿ ಹೇಳಿದ್ದಾನೆ. ಆದರೆ, ಸಾವು ಹೇಗಾಯಿತು? ಎಲ್ಲಾಯಿತು? ಮತ್ತು ಯಾವಾಗಾಯಿತು? ಎಂಬುದನ್ನು ಖಚಿತಪಡಿಸಿಲ್ಲ.
ಐಸಿಸ್ ಮುಖ್ಯಸ್ಥ ಸ್ಥಾನಕ್ಕೆ ಹೊಸ ವ್ಯಕ್ತಿಯನ್ನು ಘೋಷಿಸಲಾಗಿದ್ದು, ಅವನ ಹೆಸರು ಅಬು ಅಲ್-ಹುಸೇನ್ ಅಲ್-ಹುಸೇನಿ ಅಲ್-ಖುರೇಶಿ ಎಂದು ಆಡಿಯೊ ಸಂದೇಶದಲ್ಲಿ ಹೇಳಲಾಗಿದೆ.
ಐಸಿಎಸ್ ಎಂಬ ಉಗ್ರ ಸಂಘಟನೆಯು ಇರಾಕ್ ಮತ್ತು ಸಿರಿಯಾದಲ್ಲಿ ಸಂಪೂರ್ಣ ಇಸ್ಲಾಂ ಸಾಮ್ರಾಜ್ಯವನ್ನು ಸ್ಥಾಪಿಸುವ ಗುರಿಯೊಂದಿಗೆ ಭಯೋತ್ಪಾದನೆ ನಡೆಸುತ್ತಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.