ಸೋಮವಾರ, ಮೇ 16, 2022
22 °C

ಭ್ರಷ್ಟಾಚಾರ ಪ್ರಕರಣ: ತಪ್ಪು ಒಪ್ಪಿಕೊಳ್ಳದ ಇಸ್ರೇಲ್‌ ಪ್ರಧಾನಿ ನೇತನ್ಯಾಹು

ಎಪಿ Updated:

ಅಕ್ಷರ ಗಾತ್ರ : | |

Prajavani

ಜೆರುಸಲೇಂ: ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರ ವಿಚಾರಣೆ ಪುನರಾರಂಭಗೊಂಡಿದ್ದು, ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಸೋಮವಾರ ನ್ಯಾಯಾಲಯದಲ್ಲಿ ತಿಳಿಸಿದ್ದಾರೆ. 

ನೆತನ್ಯಾಹು ಅವರು ವಂಚನೆ, ನಂಬಿಕೆ ದ್ರೋಹ ಮತ್ತು ಲಂಚ ಪಡೆದ ಆರೋಪ ಎದುರಿಸುತ್ತಿದ್ದಾರೆ. ಲಾಕ್‌ಡೌನ್‌ನಿಂದಾಗಿ ಈ ಪ್ರಕರಣಗಳ ವಿಚಾರಣೆಯನ್ನು ಮುಂದೂಡಲಾಗಿತ್ತು.

ವಿಚಾರಣೆ ವೇಳೆ ಪ್ರತಿಭಟನಕಾರರು ನ್ಯಾಯಾಲಯದ ಮುಂದೆ ಜಮಾಯಿಸಿದ್ದರು. ಪ್ರಧಾನಿ ಅವರ ಪ್ರತಿಕ್ರಿಯೆಯನ್ನು ಅವರ ಪರ ವಕೀಲರು ಲಿಖಿತ ರೂಪದಲ್ಲಿ ನ್ಯಾಯಲಯದ ಮುಂದೆ ಸಲ್ಲಿಸಿದರು. ನೆತನ್ಯಾಹು ಅವರು ಕೇವಲ 20 ನಿಮಿಷಗಳ ಕಾಲ ವಿಚಾರಣೆಗೆ ಹಾಜರಾಗಿದ್ದರು. ನಂತರ ನ್ಯಾಯಾಲಯದಿಂದ ಹೊರಟು ಹೋದರು. ಉಳಿದ ವಿಚಾರಣೆ ಅವರ ಅನುಪಸ್ಥಿತಿಯಲ್ಲಿ ನಡೆಯಿತು.

ಅಟಾರ್ನಿ ಜನರಲ್‌ ಅವರು ತನಿಖೆಗೆ ಸೂಕ್ತವಾಗಿ ಲಿಖಿತ ಅನುಮೋದನೆ ನೀಡಿಲ್ಲ ಎಂದು ಪ್ರಧಾನಿ ಪರ ವಕೀಲರು ವಾದಿಸಿದರು. ಈ ವಾದವನ್ನು ತಿರಸ್ಕರಿಸಿದ ಪ್ರಾಸಿಕ್ಯೂಷನ್‌, ಹಲವು ಬಾರಿ ಸಭೆ ನಡೆಸಿದ ನಂತರವೇ ತನಿಖೆಗೆ ಅಟಾರ್ನಿ ಜನರಲ್‌ ಅನುಮೋದನೆ ನೀಡಿದ್ದಾರೆ ಎಂದು ತಿಳಿಸಿತು.

ಭ್ರಷ್ಟಾಚಾರ ಪ್ರಕರಣಗಳ ಜೊತೆಗೆ ಪ್ರಧಾನಿ ಅವರು ಕೋವಿಡ್‌–19 ಪ್ರಸರಣ ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ. ಅವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಇಸ್ರೇಲ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಸಲಾಗುತ್ತಿದೆ.

ಇಸ್ರೇಲ್‌ನಲ್ಲಿ ಮಾರ್ಚ್‌ 23 ರಂದು ಮುಂದಿನ ಚುನಾವಣೆ ನಡೆಯಲಿದ್ದು, ನೆತನ್ಯಾಹು ಅವರು ತಮ್ಮ ನೇತೃತ್ವದ 12 ವರ್ಷಗಳ ಸುದೀರ್ಘ ಆಡಳಿತ ಮುಂದುವರಿಯುವ ವಿಶ್ವಾಸದಲ್ಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು