ಶನಿವಾರ, ಮಾರ್ಚ್ 25, 2023
28 °C

ಜಾನ್ಸನ್ ಆ್ಯಂಡ್‌ ಜಾನ್ಸನ್ ಲಸಿಕೆ ಡೆಲ್ಟಾ ವಿರುದ್ಧ ಪರಿಣಾಮಕಾರಿ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಜಾನ್ಸನ್ ಆ್ಯಂಡ್‌ ಜಾನ್ಸನ್ ಸಂಸ್ಥೆ ಅಭಿವೃದ್ಧಿಪಡಿಸಿರು ಲಸಿಕೆಯ ಏಕ ಡೋಸ್‌ ಡೆಲ್ಟಾ ರೂಪಾಂತರ ಮತ್ತು ಇತರ ಸಂಭಾವ್ಯ ತಳಿಗಳ ವಿರುದ್ಧ ಬಲವಾದ ರಕ್ಷಣೆ ನೀಡುತ್ತದೆ. ಅಲ್ಲದೆ, ಸೋಂಕಿನ ವಿರುದ್ಧ ದೀರ್ಘಕಾಲದಲ್ಲಿಯೂ ದೃಢವಾದ ರಕ್ಷಣೆ ನೀಡುತ್ತದೆ ಎಂದು ಸಂಸ್ಥೆ ಗುರುವಾರ ಹೇಳಿದೆ.

‘ನಮ್ಮ ಲಸಿಕೆ ಸ್ವೀಕರಿಸುವವರಿಗೆ ರೋಗನಿರೋಧಕ ಪ್ರತಿಕ್ರಿಯೆಯ ಬಾಳಿಕೆ ಕನಿಷ್ಠ ಎಂಟು ತಿಂಗಳವರೆಗೆ ಇರುತ್ತದೆ ಎಂಬುದು ಅಧ್ಯಯನಗಳಿಂದ ಗೊತ್ತಾಗಿದೆ,’ ಎಂದು ಜಾನ್ಸನ್ ಅ್ಯಂಡ್‌ ಜಾನ್ಸನ್‌ ಹೇಳಿದೆ.

‘ಲಸಿಕೆ ಶೇ 85 ಪರಿಣಾಮಕಾರಿಯಾಗಿದ್ದು, ಕಾಯಿಲೆಯಿಂದ ಗಂಭೀರಗೊಂಡು ಆಸ್ಪತ್ರೆಗೆ ದಾಖಲಾಗುವ ಮತ್ತು ಸಾವಿಗೀಡಾಗುವುದನ್ನು ಈ ಲಸಿಕೆ ತಡೆಯಲಿದೆ,’ ಎಂದೂ ಸಂಸ್ಥೆಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಮಥೈ ಮಾಮೆನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೊರೊನಾ ವೈರಸ್‌ನ ರೂಪಾಂತರ ತಳಿ ಡೆಲ್ಟಾ ಮೊದಲು ಭಾರತದಲ್ಲಿ ಪತ್ತೆಯಾಯಿತು. ಈ ನೂರಕ್ಕೂ ಅಧಿಕ ದೇಶಗಳಲ್ಲಿ ಈ ತಳಿ ಹಾವಳಿ ಇಟ್ಟಿದೆ. ಇದು ಪ್ರಬಲವಾಗಿ ರೂಪಾಂತರವಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು