ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌ನಲ್ಲಿ ರಕ್ಷಣಾ ಇಲಾಖೆಗೆ ಹೆಚ್ಚುವರಿ ಹಣ: ಜಪಾನ್ ಸಚಿವ ಸಂಪುಟ ಅನುಮೋದನೆ

Last Updated 21 ಡಿಸೆಂಬರ್ 2020, 8:12 IST
ಅಕ್ಷರ ಗಾತ್ರ

ಟೋಕಿಯೊ: ಚೀನಾ ಮತ್ತು ಉತ್ತರ ಕೊರಿಯಾದ ಸಂಭವನೀಯ ಬೆದರಿಕೆಗಳನ್ನು ಎದುರಿಸಲು ದೂರಗಾಮಿ ಕ್ಷಿಪಣಿಗಳು ಹಾಗೂ ಯುದ್ಧ ನೌಕೆಗಳನ್ನು ನಿರ್ಮಿಸಲು ಹೆಚ್ಚಿನ ಹಣ ವ್ಯಯಿಸುತ್ತಿದ್ದು, ಈ ಸಂಬಂಧ ಬಜೆಟ್‌ನಲ್ಲಿ ರಕ್ಷಣಾ ಇಲಾಖೆಗೆ ಹೆಚ್ಚುವರಿ ಹಣ ತೆಗೆದಿರಿಸಲು ಜಪಾನ್ ಸಚಿವ ಸಂಪುಟ ಅನುಮೋದನೆ ನೀಡಿದೆ.

2021ರ ಹಣಕಾಸು ವರ್ಷದ ಬಜೆಟ್‌ನಲ್ಲಿ 5.34 ಟ್ರಿಲಿಯನ್ ಯೆನ್ (51.7 ಬಿಲಿಯನ್ ಡಾಲರ್) ಹಣವನ್ನು ರಕ್ಷಣಾ ಇಲಾಖೆಗಾಗಿ ತೆಗೆದಿರಿಸಲಾಗುತ್ತಿದೆ.

ಇದು ಪ್ರಸಕ್ತ ವರ್ಷದಲ್ಲಿ ತೆಗೆದಿಟ್ಟಿರುವ ಹಣಕ್ಕಿಂತ ಶೇ 1.1ರಷ್ಟು ಹೆಚ್ಚಿದೆ. ಮುಂದಿನ ಆರ್ಥಿಕ ವರ್ಷದ 106 ಟ್ರಿಲಿಯನ್ ಯೆನ್‌ (ಯುಎಸ್‌ಡಿ 1.03 ಟ್ರಿಲಿಯನ್‌) ಬಜೆಟ್‌ನ ಭಾಗವಾಗಿರಲಿದ್ದು, ಸಂಸತ್ತಿನ ಅನುಮೋದನೆಗೆ ಸಿದ್ಧಪಡಿಸಲಾಗಿದೆ. ಈ ಬಜೆಟ್‌ನಲ್ಲಿ ದೂರಗಾಮಿ ಕ್ಷಿಪಣಿಗಳ ಅಭಿವೃದ್ಧಿಯ ವೆಚ್ಚವೂ ಒಳಗೊಂಡಿದೆ ಎಂದು ರಕ್ಷಣಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT