ಶುಕ್ರವಾರ, ಮೇ 14, 2021
31 °C

ಮ್ಯಾನ್ಮಾರ್‌ನಲ್ಲಿ ಜಪಾನ್ ಪತ್ರಕರ್ತನ ಬಂಧನ: ಬಿಡುಗಡೆ ಮಾಡುವಂತೆ ಒತ್ತಾಯ

ಎಪಿ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಭದ್ರತಾ ಪಡೆಗಳು ಯಾಂಗೂನ್‌ನಲ್ಲಿ ಭಾನುವಾರ ಬಂಧಿಸಿರುವ ಜಪಾನಿನ ಪತ್ರಕರ್ತರೊಬ್ಬರನ್ನು ಬಿಡುಗಡೆ ಮಾಡುವಂತೆ ಜಪಾನ್ ಸರ್ಕಾರ ಮ್ಯಾನ್ಮಾರ್‌ ಆಡಳಿತವನ್ನು ಕೇಳಿದೆ.

ಈ ಕುರಿತು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜಪಾನ್ ಸರ್ಕಾರದ ಮುಖ್ಯ ಕಾರ್ಯದರ್ಶಿ ಕತ್ಸುನೊಬು ಕಟೊ, ‘ಪತ್ರಕರ್ತನನ್ನು ಬಂಧಿಸಿರುವ ಕಾರಣ ಮತ್ತು ಅವರ ವಿವರಗಳನ್ನು ನೀಡುವ ಜತೆಗೆ, ಸಾಧ್ಯವಾದಷ್ಟು ಬೇಗ ಅವರನ್ನು ಬಿಡುಗಡೆ ಮಾಡಬೇಕು‘ ಎಂದು ಕೇಳಿದ್ದಾರೆ.

ಯಾಂಗೂನ್‌ ನಲ್ಲಿರುವ ಹವ್ಯಾಸಿ ಪತ್ರಕರ್ತ ಹಾಗೂ ನಿಕ್ಕಿ ಬ್ಯುಸಿನೆಸ್‌ ಪತ್ರಿಕೆಯ ಮಾಜಿ ವರದಿಗಾರ ಯುಕಿ ಕಿಟಝುಮಿ ಬಂಧಿತರು ಎಂದು ಜಪಾನ್‌ನ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ... ರಷ್ಯಾ: ಜೆಕ್‌ನ 18 ರಾಜತಾಂತ್ರಿಕ ಅಧಿಕಾರಿಗಳಿಗೆ ದೇಶ ತೊರೆಯಲು ಸೂಚನೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು