ಬುಧವಾರ, ಡಿಸೆಂಬರ್ 7, 2022
22 °C

ಜಪಾನ್‌: ಮಣ್ಣು ಕುಸಿತದಲ್ಲಿ ಇಬ್ಬರು ಸಾವು– ಹಲವರು ನಾಪತ್ತೆ

ಎಪಿ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ‘ಟೋಕಿಯೊದ ನೈರುತ್ಯಕ್ಕಿರುವ ಪಟ್ಟಣವೊಂದರಲ್ಲಿ ಭಾರಿ ಮಳೆಯಿಂದಾಗಿ ಸಂಭವಿಸಿದ ಮಣ್ಣು ಕುಸಿತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. 20 ಮಂದಿ ನಾಪತ್ತೆಯಾಗಿದ್ದಾರೆ. 1,000ಕ್ಕೂ ಹೆಚ್ಚು ಸೈನಿಕರು, ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಅಟಾಮಿ ಪಟ್ಟಣದ ಇಜುಸ್‌ನಲ್ಲಿ ಶನಿವಾರ ಭಾರಿ ಮಳೆಯಿಂದಾಗಿ ಮಣ್ಣು ಕುಸಿತ ಸಂಭವಿಸಿದೆ. ಹಲವು ಮನೆಗಳು, ಕಾರುಗಳು ಹಾನಿಗೊಳಗಾಗಿವೆ.

‘ಅಟಾಮಿಯಲ್ಲಿ  ಸಂಭವಿಸಿದ ಮಣ್ಣು ಕುಸಿತದಲ್ಲಿ 130 ಮನೆಗಳು ಹಾನಿಯಾಗಿವೆ. ಈವರೆಗೆ 19 ಮಂದಿಯನ್ನು ರಕ್ಷಿಸಲಾಗಿದೆ’ ಎಂದು ಜಪಾನ್‌ ಪ್ರಧಾನಿ ಯೋಶಿಹಿದೆ ಸುಗಾ ಮಾಹಿತಿ ನೀಡಿದರು.

ಈ ಸಂಬಂಧ ತುರ್ತು ಸಂಪುಟ ಸಭೆ ಕರೆಯಲಾಗಿತ್ತು. ಬಳಿಕ ಮಾತನಾಡಿದ ಅವರು,‘ಮಣ್ಣು ಕುಸಿತದಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ. ಇಬ್ಬರಿಗೆ ಗಾಯಗಳಾಗಿವೆ. ಹಲವರು ನಾಪತ್ತೆಯಾಗಿದ್ದಾರೆ. ಇಲ್ಲಿ ಇನ್ನೂ ಭಾರಿ ಮಳೆ ಸುರಿಯುತ್ತಿದೆ. ಹಲವು ಭೂಕುಸಿತಗಳು ಸಂಭವಿಸುವ ಸಾಧ್ಯತೆಗಳಿವೆ ಎಂದು ಅವರು ಹೇಳಿದ್ದಾರೆ.

‘ಮೃತರು ಮಹಿಳೆಯರಾಗಿದ್ದು, ಅವರ ಶರೀರಗಳು ಸಮುದ್ರದ ನೀರಿನಲ್ಲಿ ಪತ್ತೆಯಾಗಿವೆ. ಅಟಾಮಿಯಿಂದ 121 ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ’ ಎಂದು ವಿಪತ್ತು ನಿಯಂತ್ರಣ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು