ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ತಾವು ಸಲ್ಲಿಸಿರುವ ಆದಾಯ ತೆರಿಗೆ ರಿಟರ್ನ್ಸ್ ನ ವಿವರಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಬಿಡುಗಡೆ ಮಾಡಿದ್ದಾರೆ.

ಬೈಡನ್ ಅವರಿಗಿಂತ ಕಮಲಾ ಹ್ಯಾರಿಸ್ ಅವರ ಆದಾಯವೇ ಜಾಸ್ತಿ ಇರುವುದನ್ನು ಈ ವಿವರಗಳು ಹೇಳುತ್ತವೆ. 2020ರಲ್ಲಿ ಕಮಲಾ ಹ್ಯಾರಿಸ್ ಅವರ ಆದಾಯ ₹ 7.30 ಕೋಟಿಗೂ ಅಧಿಕ (ಹತ್ತು ಲಕ್ಷ ಡಾಲರ್) ಇದೆ. ಬೈಡನ್ ಅವರ ಆದಾಯ ಇದೇ ಅವಧಿಯಲ್ಲಿ ₹ 4.43 ಕೋಟಿ (6,07,336 ಡಾಲರ್) ಇತ್ತು ಎಂಬುದು ಈ ದಾಖಲೆಗಳಿಂದ ತಿಳಿದು ಬರುತ್ತದೆ ಎಂದು ಶ್ವೇತಭವನ ತಿಳಿಸಿದೆ.

ಬೈಡನ್ ಹಾಗೂ ಪತ್ನಿ ಜಿಲ್ ಅವರು ಜಂಟಿಯಾಗಿ ತಮ್ಮ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದ್ದಾರೆ. ಜಿಲ್ ಅವರು ವೃತ್ತಿಯಿಂದ ಶಿಕ್ಷಕಿಯಾಗಿದ್ದಾರೆ. 2020ರಲ್ಲಿ ಅವರ ಆದಾಯ ₹ 4.43 ಕೋಟಿ. 2019ರಲ್ಲಿ ಇಬ್ಬರ ಒಟ್ಟು ಆದಾಯ ₹ 7.19 ಕೋಟಿ (985,223 ಡಾಲರ್) ಇತ್ತು. ಕಳೆದ ವರ್ಷ ಅವರು ಶೇ 25.9ರಂತೆ ಒಟ್ಟು ₹ 1.15 ಕೋಟಿ (157,414 ಡಾಲರ್) ಆದಾಯ ತೆರಿಗೆ ಪಾವತಿಸಿದ್ದಾರೆ ಎಂದೂ ಶ್ವೇತಭವನದ ಪ್ರಕಟಣೆ ತಿಳಿಸಿದೆ.

ಕಮಲಾ ಹ್ಯಾರಿಸ್ ಹಾಗೂ ಪತಿ ಡೋ ಎಮ್ಹಾಫ್ ಅವರು 2020ರಲ್ಲಿ ಜಂಟಿಯಾಗಿ ₹ 4.54 ಕೋಟಿ ಆದಾಯ ತೆರಿಗೆ ಸಲ್ಲಿಸಿದ್ದಾರೆ. ₹ 19 ಲಕ್ಷ ವಿವಿಧ ಸಮಾಜಸೇವಾ ಕಾರ್ಯಕ್ಕಾಗಿ ವಿನಿಯೋಗಿಸಿದ್ದಾರೆ ಎಂದೂ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.