ಶನಿವಾರ, ಮೇ 28, 2022
26 °C

ಗರ್ಭಪಾತ ನಿಷೇಧ ಕರಡು: ಜೋ ಬೈಡನ್‌ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಗರ್ಭಪಾತವನ್ನು ರಾಷ್ಟ್ರವ್ಯಾಪಿ ಕಾನೂನುಬದ್ಧಗೊಳಿಸಿರುವ 1973ರ ರೋಯ್‌ ವಿ.ವೇಡ್‌ ನಿರ್ಧಾರವನ್ನು ರದ್ದು ಪಡಿಸುವ ಸುಪ್ರೀಂ ಕೋರ್ಟ್‌ನ ಕರಡನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಮಂಗಳವಾರ ಟೀಕಿಸಿದ್ದಾರೆ.

 ‘ಇದು ಅಮೆರಿಕದ ನ್ಯಾಯಾಂಗ ವ್ಯವಸ್ಥೆಯಲ್ಲಿ ಮೂಲಭೂತವಾದ ಬದಲಾವಣೆಯಾಗಿದೆ’ ಎಂದು ಬೈಡನ್‌ ಹೇಳಿದ್ದಾರೆ. ಸಲಿಂಗ ವಿವಾಹ ಸೇರಿದಂತೆ ಇತರ ಹಕ್ಕುಗಳ ಮೇಲೂ ಇದರ ಪರಿಣಾಮ ಬೀರಲಿದೆ ಎಂದಿದ್ದಾರೆ.

ಸುಪ್ರೀಂ ಕೋರ್ಟ್‌ನ ಕರಡಿನ ಕುರಿತು ‘ಪೊಲಿಟಿಕೊ’ ಎಂಬ ಮಾಧ್ಯಮದಲ್ಲಿ ಪ್ರಕಟವಾಗಿರುವ ಸುದ್ದಿ ಅಧಿಕೃತವಾಗಿದೆ ಎಂದು ನ್ಯಾಯಾಲಯವು ದೃಢಪಡಿಸಿದೆ. ಆದರೆ, ಇದು ನ್ಯಾಯಮೂರ್ತಿಗಳ ಅಂತಿಮ ನಿರ್ಧಾರವನ್ನು ಪ್ರತಿನಿಧಿಸುವುದಿಲ್ಲ ಎಂದಿದೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು