ಗುರುವಾರ , ಫೆಬ್ರವರಿ 25, 2021
28 °C

ಬೈಡನ್ ಪ್ರಮಾಣವಚನಕ್ಕೆ ಟ್ರಂಪ್ ಬೆಂಬಲಿಗರಿಂದ ಹಿಂಸಾಚಾರದ ಭೀತಿ

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್: ಅಮೆರಿಕದ ನೂತನ ನಿಯೋಜಿತ ಅಧ್ಯಕ್ಷ ಜೋ ಬೈಡನ್, ಜನವರಿ 20ರಂದು ಪ್ರಮಾಣವಚನ ಸ್ವೀಕರಿಸುವ ಮೂಲಕ ಅಧಿಕಾರ ವಹಿಸಲಿದ್ದಾರೆ. ಈ ಮಧ್ಯೆ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರಿಂದ ಹಿಂಸಾಚಾರದ ಭೀತಿ ಹಿನ್ನಲೆಯಲ್ಲಿ ಗರಿಷ್ಠ ಭದ್ರತೆ ಒದಗಿಸಲಾಗಿದೆ.

ಜೋ ಬೈಡನ್ ಅಧಿಕಾರ ವಹಿಸಲಿರುವ ಮೊದಲ ದಿನದಂದೇ 12ರಷ್ಟು ಎಕ್ಸಿಕ್ಯೂಟಿವ್ ಆದೇಶಗಳಿಗೆ ಸಹಿ ಹಾಕಲಿದ್ದಾರೆ ಎಂದು ನೂತನ ಅಧ್ಯಕ್ಷರ ಉನ್ನತ ಸಹಾಯಕ ಮೂಲಗಳು ಶನಿವಾರ ತಿಳಿಸಿದೆ.

ಕೆಲವು ದಿನಗಳ ಹಿಂದೆಯಷ್ಟೇ ಅಮೆರಿಕ ಕ್ಯಾಪಿಟಲ್‌ಗೆ ದಾಳಿ ನಡೆಸಿದ್ದ ಟ್ರಂಪ್ ಬೆಂಬಲಿಗರು ಹಿಂಸಾಚಾರ ನಡೆಸಿದ್ದರು. ಇದಕ್ಕೆ ಸಮಾನವಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಮಾಡುವ ಭೀತಿಯಿರುವ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಭದ್ರತೆಯನ್ನು ಕೈಗೊಂಡಿದ್ದಾರೆ.

ಉದ್ಘಾಟನಾ ಸಮಾರಂಭ ನಡೆಯುವ ವಾಷಿಂಗ್ಟನ್‌ನಲ್ಲಿ ಈಗಾಗಲೇ ಭದ್ರತಾ ಸಿಬ್ಬಂದಿಗಳು ಹ್ಯಾಂಡ್‌ಗನ್ ಹೊಂದಿರುವ ವ್ಯಕ್ತಿಯೊಬ್ಬರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: 

ಪ್ರಮಾಣವಚನ ಸ್ವೀಕರಿಸುವ ಮೊದಲ ದಿನದಲ್ಲೇ ಕೊರೊನಾ ವೈರಸ್ ಸಾಂಕ್ರಾಮಿಕ ರೋಗ, ಅಮೆರಿಕದ ಆರ್ಥಿಕತೆ, ಹವಾಮಾನ ಬದಲಾವಣೆ ಮತ್ತು ಜನಾಂಗೀಯ ನಿಂದನೆಗಳು ಸೇರಿದಂತೆ ಹಲವು ಎಕ್ಸಿ‌ಕ್ಯೂಟಿವ್ ಆದೇಶಗಳಿಗೆ ಜೋ ಬೈಡನ್ ಸಹಿ ಮಾಡುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈ ಎಲ್ಲ ಬಿಕ್ಕಟ್ಟುಗಳಿಗೆ ತುರ್ತು ಕ್ರಮಗಳ ಅಗತ್ಯವಿದೆ ಎಂದು ಬೈಡನ್ ಆಡಳಿತದಲ್ಲಿ ಚೀಫ್ ಆಫ್ ಸ್ಟಾಫ್ ಆಗಿ ಅಧಿಕಾರ ವಹಿಸಲಿರುವ ರಾನ್ ಕ್ಲೈನ್ ತಿಳಿಸಿದ್ದಾರೆ.

ಜೋ ಬೈಡನ್ ಅಧಿಕಾರ ವಹಿಸಿಕೊಂಡ ಮೊದಲ 10 ದಿನಗಳಲ್ಲಿ ಈ ನಾಲ್ಕು ಬಿಕ್ಕಟ್ಟುಗಳನ್ನು ತುರ್ತಾಗಿ ಪರಿಹರಿಸಲು ಮತ್ತು ಜಾಗತಿಕ ಮಟ್ಟದಲ್ಲಿ ಅಮೆರಿಕದ ಸ್ಥಾನವನ್ನು ಪುನಃಸ್ಥಾಪಿಸಲು ನಿರ್ಣಾಯಕ ಕ್ರಮ ಕೈಗೊಳ್ಳುತ್ತಾರೆ ಎಂದವರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು