ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಡನ್‌ರ ಕನಿಷ್ಠ ವೇತನ ಯೋಜನೆಯಿಂದ 2025ರ ವೇಳೆಗೆ 14 ಲಕ್ಷ ಉದ್ಯೋಗ ನಷ್ಟ: ಅಧ್ಯಯನ

Last Updated 9 ಫೆಬ್ರುವರಿ 2021, 1:57 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್ ಅವರು ಪ್ರಸ್ತಾಪಿಸಿರುವ ಕನಿಷ್ಠ ವೇತನ ಹೆಚ್ಚಳ ಯೋಜನೆಯಿಂದ 2025ರ ವೇಳೆ 14 ಲಕ್ಷ ಉದ್ಯೋಗ ಕಡಿತವಾಗಲಿದೆ. ಆದರೆ, 9 ಲಕ್ಷ ಮಂದಿ ಬಡತನದಿಂದ ಹೊರಬರಲಿದ್ದಾರೆ ಎಂದು ಅಧ್ಯಯನ ವರದಿ ಹೇಳಿದೆ.

ಅಮೆರಿಕ ಕಾಂಗ್ರೆಸ್‌ನ ಬಜೆಟ್‌ ಕಚೇರಿ ಈ ವರದಿ ಸಿದ್ಧಪಡಿಸಿದ್ದು, ಬೈಡನ್ ಪ್ರಸ್ತಾವದಿಂದ ಇನ್ನೂ 27 ಲಕ್ಷ ಉದ್ಯೋಗಿಗಳ ವೇತನ ಹೆಚ್ಚಳವಾಗಲಿದೆ. ಒಟ್ಟಾರೆ ಗಳಿಕೆಯ ಪ್ರಮಾಣ ಹೆಚ್ಚಲಿದೆ. ಈ ಹೆಚ್ಚಳವು ಯೋಜಿತ ಉದ್ಯೋಗ ಕಡಿತದ ಮೂಲಕ ಕೆಲಸ ಕಳೆದುಕೊಂಡರಿಗಿಂತಲೂ ಹೆಚ್ಚಿರಲಿದೆ ಎಂದು ತಿಳಿಸಿದೆ.

ಸದ್ಯ ಅಮೆರಿಕದಲ್ಲಿ ಗಂಟೆಗೆ 7.25 ಡಾಲರ್ ಕನಿಷ್ಠ ವೇತನ ನಿಗದಿಯಾಗಿದೆ. ಇದನ್ನು 2025ರ ವೇಳೆಗೆ 15 ಡಾಲರ್‌ಗೆ ಹೆಚ್ಚಿಸುವ ಬಗ್ಗೆ ಬೈಡನ್ ಪ್ರಸ್ತಾಪಿಸಿದ್ದಾರೆ.

ದೇಶದಲ್ಲಿಸುಧಾರಣೆಗಳ ಜತೆಗೆ, ಮಿತ್ರ ರಾಷ್ಟ್ರಗಳೊಂದಿಗಿನ ಸಂಬಂಧವನ್ನು ಸುಧಾರಿಸಲು ತನ್ನ ಆಡಳಿತ ಒತ್ತು ನೀಡಲಿದೆ ಎಂದೂ ಬೈಡನ್ ಇತ್ತೀಚೆಗೆ ಹೇಳಿದ್ದರು. ಸೋಮವಾರ ರಾತ್ರಿ ಪ್ರಧಾನಿ ನರೇಂದ್ರ ಮೋದಿ ಜತೆಗೂ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಈ ವೇಳೆ, ಕೋವಿಡ್–19 ಸಾಂಕ್ರಾಮಿಕ, ಆರ್ಥಿಕತೆ, ಹವಾಮಾನ ಬದಲಾವಣೆ ವಿಚಾರದಲ್ಲಿ ಜತೆಯಾಗಿ ಕೆಲಸ ಮಾಡುವುದು, ದ್ವಿಪಕ್ಷೀಯ ಬಾಂಧವ್ಯ ವೃದ್ಧಿ, ಏಷ್ಯಾ ಪೆಸಿಫಿಕ್ ಪ್ರದೇಶ ಹಾಗೂ ಅದರಾಚೆಗೆ ಶಾಂತಿ ಸ್ಥಾಪನೆ ಮಾಡುವ ವಿಚಾರದಲ್ಲಿ ಇಬ್ಬರೂ ನಾಯಕರು ಬದ್ಧತೆ ಪ್ರದರ್ಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT