ಎಡ್ವರ್ಡ್ ಮಾರ್ಕಿ ವಿರುದ್ಧ ಜೊ ಕೆನಡಿಗೆ ಸೋಲು

ಬೋಸ್ಟನ್: ಅಮೆರಿಕದ ಡೆಮಾಕ್ರಟಿಕ್ ಸೆನೆಟ್ ಪ್ರಾಥಮಿಕ ಸದಸ್ಯತ್ವಕ್ಕಾಗಿ ಮಂಗಳವಾರ ನಡೆದ ಆಯ್ಕೆಯಲ್ಲಿ ಅಮೆರಿಕದ ಸೆನಟರ್ ಎಡ್ವರ್ಡ್ ಮಾರ್ಕಿನ್ ವಿರುದ್ಧ ಅಮೆರಿಕದ ಪ್ರತಿನಿಧಿ ಜೊ ಕೆನಡಿ-3 ಸೋತಿದ್ದಾರೆ.
ಈ ಮೂಲಕ ಮಾರ್ಕಿ ಅವರು ಮುಂದಿನ ಆರು ವರ್ಷಗಳವರೆಗೆ ಅಮೆರಿಕದ ಚುನಾವಣೆ ಸಂಭಾವ್ಯ ಅಭ್ಯರ್ಥಿಯಾಗುವುದಕ್ಕಾಗಿ ವೇದಿಕೆ ಸಿದ್ಧಪಡಿಸಿಕೊಂಡಿದ್ದಾರೆ.
ಈ ಗೆಲುವು, ವಂಶಪಾರಂಪರ್ಯ ರಾಜಕೀಯ ಕುಟುಂಬದ ಯುವ ಪೀಳಿಗೆಗೆ ಅಧಿಕಾರ ನೀಡುವುದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿರುವುದಾಗಿ ವಿಶ್ಲೇಷಿಸಲಾಗುತ್ತಿದೆ. ಅಂದಹಾಗೆ, ಸೋಲುಂಡಿರುವ ಜೊ ಕೆನಡಿ-3 ಅವರು ಅಮೆರಿಕದ ಹಿರಿಯ ರಾಜಕಾರಣಿ ರಾಬರ್ಟ್ ಎಫ್. ಕೆನಡಿ ಅವರ ಮೊಮ್ಮಗ.
ಈ ಚುನಾವಣೆಯ ಪ್ರಚಾರದ ವೇಳೆ 74 ವರ್ಷದ ಮಾರ್ಕಿ ಅವರು ಡೆಮಾಕ್ರಟಿಕ್ ಪಾರ್ಟಿಯ ಉದಾರವಾದಿ ವಿಭಾಗದ ಸದಸ್ಯರಾಗಿದ್ದರು. ಇವರು ‘ಗ್ರೀನ್ ನ್ಯೂ ಡೀಲ್’ ಕುರಿತು ನ್ಯೂಯಾರ್ಕ್ ಪ್ರತಿನಿಧಿ ಅಲೆಕ್ಸಾಂಡ್ರಿಯಾ ಒಕಾಸಿಒ–ಕಾರ್ಟೆಜ್ ಅವರೊಂದಿಗೆ ಕೈಜೋಡಿಸಿದ್ದರು. 39 ವರ್ಷದ ಕೆನಡಿ ಅವರಿಗಿದ್ದಿದ್ದು ‘ಪ್ರಗತಿಪರ’ಎಂಬ ಹೆಸರು ಮಾತ್ರ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.