ಶುಕ್ರವಾರ, ಅಕ್ಟೋಬರ್ 2, 2020
24 °C
ವಿಮಾನ ಅಪಘಾತ; ಭಾರತೀಯರಿಗೆ ನೆರವು

ದುಬೈ: ಶನಿವಾರವೂ ಭಾರತೀಯ ಕಾನ್ಸುಲೇಟ್ ಕಾರ್ಯನಿರ್ವಹಣೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: ಕೊಯಿಕ್ಕೋಡ್‌ನ ವಿಮಾನ ಅಪಘಾತಕ್ಕೆ ಸಂಬಂಧಿಸಿದಂತೆ ಕೇರಳಕ್ಕೆ ಪ್ರಯಾಣಿಸುವವರಿಗೆ ನೆರವಾಗುವುದಕ್ಕಾಗಿ ಇಲ್ಲಿ ಭಾರತೀಯ ರಾಯಭಾರ ಕಚೇರಿ ಶನಿವಾರವೂ ಕಾರ್ಯನಿರ್ವಹಿಸುತ್ತಿದೆ.

’ವಿಮಾನ ಅಪಘಾತದಲ್ಲಿ ಗಾಯಗೊಂಡಿರುವ ಪ್ರಯಾಣಿಕರು ಮತ್ತು ಮೃತಪಟ್ಟಿರುವ ಕುಟುಂಬದ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದೇವೆ. ಅವರೆಲ್ಲರಿಗೂ ನೆರವಾಗಲು ನಮ್ಮ ಕೈಲಾದಷ್ಟು ಪ್ರಯತ್ನ ಮಾಡುತ್ತೇವೆ’ ಎಂದು ರಾಯಭಾರಿ ಕಚೇರಿ ಶುಕ್ರವಾರ ಸಂj ಟ್ವೀಟ್ ಮಾಡಿದೆ.

ದುಬೈನ ಭಾರತೀಯ ರಾಯಭಾರ ಕಚೇರಿಗೆ ಹೊಸದಾಗಿ ನೇಮಕಗೊಂಡಿರುವ ಕಾನ್ಸುಲ್‌ ಜನರಲ್ ಡಾ. ಅಮನ್ ಪುರಿ, ’ಅಪಘಾತಗೊಂಡ ವಿಮಾನದಲ್ಲಿ ಎಲ್ಲ ವರ್ಗದ ಭಾರತೀಯರು ಪ್ರಯಾಣ ಮಾಡುತ್ತಿದ್ದರು. ಕೆಲವರು ತಮ್ಮ ಕುಟುಂಬದ ಸದಸ್ಯರನ್ನು ಭೇಟಿಯಾಗಲು ಹೋಗುತ್ತಿದ್ದರು. ಇನ್ನು ಕೆಲವರು ಉದ್ಯೋಗ ಕಳೆದುಕೊಂಡವರು ಇದ್ದರು. ಕೆಲವರು ವೈದ್ಯಕೀಯ ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪ್ರಯಾಣ ಬೆಳೆಸುತ್ತಿದ್ದರು’ ಎಂದು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: 

ಕೊಯಿಕ್ಕೋಡ್ ವಿಮಾನ ಅಪಘಾತದ ಸಂಬಂಧದ ಮಾಹಿತಿ ನೆರವಿಗಾಗಿ ದುಬೈ, ಶಾರ್ಜಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಸಹಾಯವಾಣಿಯನ್ನು ತೆರೆಯಲಾಗಿದೆ. ಅವು ಹೀಗಿವೆ; +97156 5463903, +971543090572, +971543090571, +971543090575. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಶಾರ್ಜಾ ಸಹಾಯವಾಣಿ +971 6 5970303.

ನವೀಕರಣಗಳಿಗಾಗಿ ಶಾರ್ಜಾದಲ್ಲಿ ಕರೆ ಮಾಡಲು ಸಹಾಯವಾಣಿ ಸಂಖ್ಯೆ +97165970303 ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು