ಸೋಮವಾರ, ಆಗಸ್ಟ್ 15, 2022
22 °C

ವುಡ್ವರ್ಡ್‌ ಕೃತಿಯಲ್ಲಿ ಟ್ರಂಪ್ ವಿವಾದಾತ್ಮಕ ಹೇಳಿಕೆಗಳು

ಎಪಿ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್: ಇತ್ತೀಚೆಗೆ ಬಿಡುಗಡೆಯಾದ ಪತ್ರಕರ್ತ ಬಾಬ್‌ ವುಡ್ವರ್ಡ್‌ ಅವರ ‘ರೇಜ್‌' ಕೃತಿಯ ಆಯ್ದ ಭಾಗಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಲವು ವಿವಾದಾತ್ಮಕ ಹೇಳಿಕೆಗಳು ದಾಖಲಾಗಿವೆ.

ಕೃತಿಯ ಆಯ್ದ ಭಾಗಗಳಲ್ಲಿ ಟಂಪ್ ಅವರು ಹಿಂದೆ ಕೊರೊನಾ ಸೋಂಕು ಹರಡುವುದರ ವಿರುದ್ಧ ಆಡಿದ್ದ ಮಾತುಗಳಿವೆ. ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಕುರಿತು ಟ್ರಂಪ್ ಮನದಲ್ಲಿರುವ ಯೋಜನೆಗಳೂ ದಾಖಲಾಗಿವೆ.

2018ರಲ್ಲಿ ಸಿಂಗಪುರದಲ್ಲಿ ಮೊದಲ ಬಾರಿಗೆ ತನ್ನನ್ನು ಭೇಟಿಯಾದ ಕಿಮ್‌ ಜಾಂಗ್‌ ಅವರು ತನ್ನ ಚಿಕ್ಕಪ್ಪನನ್ನು ಕೊಂದಿದ್ದು ಸೇರಿದಂತೆ ಅನೇಕ ವಿಚಾರಗಳನ್ನು ತನ್ನೊಡನೆ ಹಂಚಿಕೊಂಡಿರುವುದಾಗಿ ಟ್ರಂಪ್ ಹೇಳಿರುವುದು ಈ ಕೃತಿಯಲ್ಲಿ ದಾಖಲಾಗಿದೆ.

ಪತ್ರಕರ್ತ ವುಡ್ವರ್ಡ್‌ ಅವರು ಟ್ರಂಪ್ ಅವರೊಂದಿಗೆ ಡಿಸೆಂಬರ್‌ನಿಂದ ಜುಲೈ ತಿಂಗಳ ನಡುವೆ ನಡೆಸಿದ 18 ಸಂದರ್ಶನಗಳ ಆಧಾರದ ಮೇಲೆ ಬರೆದಿರುವ ಕೆಲವು ಅಧ್ಯಾಯಗಳು ಈ ಕೃತಿಯಲ್ಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು