ಅಂಕಾರ: ಪೂರ್ವ ಟರ್ಕಿಯಲ್ಲಿ ಸೋಮವಾರ 5.2ರ ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ‘ಯುರೋಪಿಯನ್-ಮೆಡಿಟರೇನಿಯನ್ ಭೂಕಂಪನ ಕೇಂದ್ರ’ ತಿಳಿಸಿದೆ.
ಆರಂಭದಲ್ಲಿ 5.5 ತೀವ್ರತೆಯ ಭೂಕಂಪವಾಗಿರುವುದಾಗಿ ಹೇಳಲಾಗಿತ್ತು. ಭೂಕಂಪದಿಂದಾಗಿ ಮತ್ತಷ್ಟು ಸಾವು–ನೋವು, ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ಭೂಮಿಯ 5 ಕಿ.ಮೀ (3.10 ಮೈಲಿಗಳು) ಆಳದಲ್ಲಿ ಕಂಪನದ ಕೇಂದ್ರ ಬಿಂದುವನ್ನು ಗುರುತಿಸಲಾಗಿದೆ. ಮೊದಲಿಗೆ, 10 ಕಿ.ಮೀ ಆಳದಲ್ಲಿ ಭೂಕಂಪವಾಗಿದೆ ಎಂದು ತಿಳಿಸಲಾಗಿತ್ತು.
ಈ ತಿಂಗಳ ಆರಂಭದಲ್ಲಿ ಟರ್ಕಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿತ್ತು. ಸಾವಿರಾರು ಕಟ್ಟಡಗಳು ಉರುಳಿ ಬಿದ್ದು, 50 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಕಟ್ಟಡ ನಿರ್ಮಾಣದಲ್ಲಿ ಅಕ್ರಮವೆಸಗಿರುವ ಆರೋಪದ ಮೇಲೆ 184 ಜನರನ್ನು ಟರ್ಕಿ ಸರ್ಕಾರ ಈವರೆಗೆ ಬಂಧಿಸಿದೆ. ತನಿಖೆಯನ್ನು ಮತ್ತಷ್ಟು ವಿಸ್ತರಿಸುತ್ತಿರುವುದಾಗಿ ಟರ್ಕಿ ತಿಳಿಸಿದೆ.
ಇತ್ತೀಚೆಗೆ ಟರ್ಕಿಯಲ್ಲದೇ, ತಜಕೀಸ್ತಾನ, ಇಂಡೋನೇಷ್ಯಾ, ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಮಧ್ಯಮ, ಕಡಿಮೆ ಪ್ರಮಾಣದ ಭೂಕಂಪ ಉಂಟಾಗಿವೆ. ಆದರೆ, ಯಾವುದೇ ಅನಾಹುತಗಳು ಸಂಭವಿಸಿಲ್ಲ.
ಇವುಗಳನ್ನೂ ಓದಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.