ಲಂಡನ್: ಬ್ರಿಟನ್ ರಾಜ 3ನೇ ಕಿಂಗ್ ಚಾರ್ಲ್ಸ್ ಮತ್ತು ಅವರ ಪತ್ನಿ, ರಾಣಿ ಕನ್ಸರ್ಟ್ ಕ್ಯಾಮಿಲ್ಲಾ ಮೇಲೆ ಮೊಟ್ಟೆ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ.

ಉತ್ತರ ಇಂಗ್ಲೆಂಡ್ನ ಯಾರ್ಕ್ನಲ್ಲಿ ಬುಧವಾರ ನಡೆದ ಕಾರ್ಯಕ್ರಮದ ವೇಳೆ ರಾಜ ಮನೆತನದ ದಂಪತಿ ಮೇಲೆ ಮೊಟ್ಟೆ ಎಸೆತ ಪ್ರಕರಣ ನಡೆದಿದೆ.

ಚಾರ್ಲ್ಸ್ ದಂಪತಿಯನ್ನು ಸ್ವಾಗತಿಸಲು ರಾಜಮನೆತನದ ಮಿಕ್ಲೆಗೇಟ್ ಬಾರ್ನಲ್ಲಿ ಜನರು ಜಮಾಯಿಸಿದ್ದರು. ಈ ವೇಳೆ ಪ್ರತಿಭಟನಾಕಾರರೊಬ್ಬರು ಮೂರು ಮೊಟ್ಟೆಗಳನ್ನು ಎಸೆದರು. ಆದರೆ ಅದೃಷ್ಟವಶಾತ್ ಚಾರ್ಲ್ಸ್ ದಂಪತಿ ಮೇಲೆ ಮೊಟ್ಟೆ ಬೀಳಲಿಲ್ಲ.

ತಕ್ಷಣವೇ ಕಾರ್ಯಪ್ರವೃತರಾದ ಭದ್ರತಾ ಸಿಬ್ಬಂದಿ ಆತನನ್ನು ಬಂಧಿಸಿದರು.

ಈ ವೇಳೆ ಬಂಧನಕ್ಕೊಳಗಾದ ವ್ಯಕ್ತಿ, 'ಈ ದೇಶವನ್ನು ಗುಲಾಮರ ರಕ್ತದಿಂದ ನಿರ್ಮಿಸಲಾಗಿದೆ' ಎಂದು ಘೋಷಣೆ ಕೂಗಿದರು.

ಇದನ್ನೂ ಓದಿ:ಉಕ್ರೇನ್ ಮೇಲೆ ರಷ್ಯಾ ಶೆಲ್ ದಾಳಿ: 9 ಮಂದಿ ಸಾವು

ಯಾರ್ಕ್ಶೈರ್ ಭೇಟಿಯಲ್ಲಿರುವ ರಾಜ ಮನೆತನದ ದಂಪತಿ,ಇತ್ತೀಚೆಗೆ ನಿಧನರಾದರಾಣಿ 2ನೇ ಎಲಿಜಬೆತ್ ಪ್ರತಿಮೆಯನ್ನು ಅನಾವರಣಗೊಳಿಸುವುದು ಸೇರಿದಂತೆ ಅನೇಕ ಸಾಂಪ್ರದಾಯಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ನಿಗದಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.