ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಬೇರೆ ಬೇರೆ ದೇಶಗಳಲ್ಲಿ ಪತ್ತೆಯಾಯಿತು ಓಮೈಕ್ರಾನ್: ಕಠಿಣ ನಿರ್ಬಂಧಗಳ ಮೊರೆ

ಬ್ರಿಟನ್‌ನಲ್ಲಿ 14ಕ್ಕೆ ಏರಿಕೆ, ಮಾಸ್ಕ್‌ ಕಡ್ಡಾಯಗೊಳಿಸಿ ಆದೇಶ
Last Updated 30 ನವೆಂಬರ್ 2021, 16:56 IST
ಅಕ್ಷರ ಗಾತ್ರ

ಲಂಡನ್/ಸಿಂಗಪುರ/ಟೊಕಿಯೊ: ಕೊರೊನಾ ವೈರಸ್‌ನ ಹೊಸ ರೂಪಾಂತರಿ ಓಮೈಕ್ರಾನ್‌ ಆತಂಕ ಸೃಷ್ಟಿಸಿದ ನಡುವೆಯೇ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಈ ತಳಿಯ ಸೋಂಕಿನ ಪ್ರಕರಣಗಳು ಮಂಗಳವಾರ ವರದಿಯಾಗಿವೆ.

ಕೆಲವು ದೇಶಗಳಲ್ಲಿ ಈ ತಳಿ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಪ್ರಸರಣ ತಡೆಯಲು ಕೆಲ ದೇಶಗಳು ಮತ್ತಷ್ಟೂ ಕಠಿಣ ನಿರ್ಬಂಧಗಳ ಮೊರೆ ಹೋಗಿವೆ.

ಜಪಾನ್‌ ಹಾಗೂ ಫ್ರಾನ್ಸ್‌ನಲ್ಲಿ ಓಮಿಕ್ರಾನ್‌ ತಳಿ ಸೋಂಕಿನ ಮೊದಲ ಪ್ರಕರಣಗಳು ಮಂಗಳವಾರ ವರದಿಯಾಗಿವೆ.

ಹಿಂದೂಮಹಾಸಾಗರದಲ್ಲಿರುವ, ಫ್ರಾನ್ಸ್‌ ಆಡಳಿತಕ್ಕೆ ಒಳಪಟ್ಟಿರುವ ಫ್ರೆಂಚ್ ರಿಯೂನಿಯನ್ ದ್ವೀಪದಲ್ಲಿ ಓಮೈಕ್ರಾನ್‌ ತಳಿ ಸೋಂಕಿನ ಮೊದಲ ಪ್ರಕರಣ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಮೊಜಾಂಬಿಕ್‌ ಹಾಗೂ ದಕ್ಷಿಣ ಆಫ್ರಿಕಾ ಪ್ರವಾಸದ ಬಳಿಕ ದ್ವೀಪಕ್ಕೆ ಹಿಂದಿರುಗಿರುವ 53 ವರ್ಷದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ. ಸೋಂಕಿತನನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ’ ಎಂದು ದ್ವೀಪದಲ್ಲಿರುವ ಸಾಂಕ್ರಾಮಿಕ ರೋಗಗಳ ಸಂಶೋಧನಾ ಕೇಂದ್ರದ ಮೈಕ್ರೊಬಯೋಲಾಜಿಸ್ಟ್‌ ಪ್ಯಾಟ್ರಿಕ್ ಮ್ಯಾವಿನ್‌ಗುಯಿ ಹೇಳಿದ್ದಾರೆ.

‘ನಮೀಬಿಯಾಕ್ಕೆ ಭೇಟಿ ನೀಡಿದ್ದ 30 ವರ್ಷದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ. ಸೋಂಕಿತನಿಗೆ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಜಪಾನ್ ಸರ್ಕಾರದ ವಕ್ತಾರ ತಿಳಿಸಿದ್ದಾರೆ.

ನೆದರ್ಲೆಂಡ್ಸ್‌ನಲ್ಲಿಯೂ ಎರಡು ಪ್ರಕರಣಗಳು ಪತ್ತೆಯಾಗಿವೆ.ಬ್ರಿಟನ್‌ನಲ್ಲಿ ಓಮೈಕ್ರಾನ್‌ ಸೋಂಕಿನ ಪ್ರಕರಣಗಳ ಸಂಖ್ಯೆ 14ಕ್ಕೇರಿದೆ. ಸೋಂಕು ಪ್ರಸರಣ ತಡೆಯುವ ಸಲುವಾಗಿ ಬ್ರಿಟನ್‌ ಸರ್ಕಾರ ಮಾರುಕಟ್ಟೆಗಳು ಹಾಗೂ ಸಾರ್ವಜನಿಕ ಸಾರಿಗೆಗಳಲ್ಲಿ ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಿ ಮಂಗಳವಾರ ಆದೇಶಿಸಿದೆ.

ಜೋಹಾನ್ಸ್‌ಬರ್ಗ್‌ನಿಂದ ಬಂದ ಸಿಂಗಪುರ ಏರ್‌ಲೈನ್ಸ್‌ನ (ಎಸ್‌ಐಎ) ವಿಮಾನದಲ್ಲಿ (ಎಸ್‌ಕ್ಯೂ481) ಪ್ರಯಾಣಿಸಿದ್ದ ವ್ಯಕ್ತಿಯೊಬ್ಬನನ್ನು ಸಿಂಗಪುರದ ಆರೋಗ್ಯ ಸಚಿವಾಲಯ ಕ್ವಾರಂಟೈನ್‌ಗೆ ಒಳಪಡಿಸಿದೆ ಎಂದು ಸ್ಥಳೀಯ ಮಾಧ್ಯಮವೊಂದು ಮಂಗಳವಾರ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT