ಆರು ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ: ಅನುಮತಿ ಕೋರಿದ ಮಾಡೆರ್ನಾ

ವಾಷಿಂಗ್ಟನ್: ಆರು ತಿಂಗಳಿಂದ ಆರು ವರ್ಷದೊಳಗಿನ ಮಕ್ಕಳಿಗೆ ತುರ್ತು ಸಂದರ್ಭದಲ್ಲಿ ಲಸಿಕೆ ನೀಡಲು ಅವಕಾಶ ನೀಡುವಂತೆ ಕೋರಿ ಅಮೆರಿಕದ ಔಷಧೀಯ ಸಂಸ್ಥೆ ಮಾಡೆರ್ನಾ ಸರ್ಕಾರಕ್ಕೆ ಮನವಿ ಮಾಡಿದೆ.
ಅಮೆರಿಕ ಸೇರಿದಂತೆ ಕೆಲವು ದೇಶಗಳಲ್ಲಿ ಆರು ವರ್ಷದೊಳಗಿನ ಮಕ್ಕಳಿಗೆ ಇನ್ನೂ ಕೋವಿಡ್ ಲಸಿಕೆ ಲಭ್ಯವಾಗಿಲ್ಲ.
ಈ ಕುರಿತು ಮಾಹಿತಿ ನೀಡಿದ ಮಾಡೆರ್ನಾ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಟೀಫನ್ ಬ್ಯಾನ್ಸೆಲ್, ‘ಕೊರೊನಾ ವಿರುದ್ಧದ ಯುದ್ಧದಲ್ಲಿ ಮಕ್ಕಳು ಸುರಕ್ಷಿತವಾಗಿರುವಂತೆ ನೋಡಿಕೊಳ್ಳುತ್ತೇವೆ ಎಂಬ ಭರವಸೆ ನಮಗೆ ಇದೆ. ಎಲ್ಲ ಪೋಷಕರು ಹಾಗೂ ಪಾಲಕರನ್ನು ಈ ಲಸಿಕಾ ಅಭಿಯಾನಕ್ಕೆ ಸ್ವಾಗತಿಸುತ್ತೇವೆ’ ಎಂದು ಹೇಳಿದರು.
ಪ್ರಯೋಗಾರ್ಥ ಪರೀಕ್ಷೆ ವೇಳೆ ನವಜಾತ ಶಿಶುಗಳು, ಆರು ವರ್ಷದ ಮಕ್ಕಳಿಗೆ 25 ಮೈಕ್ರೊ ಗ್ರಾಂನ ಎರಡು ಡೋಸ್ ಹಾಗೂ 18 ರಿಂದ 25 ವರ್ಷದವರಿಗೆ 100 ಮೈಕ್ರೊ ಗ್ರಾಂನ ಎರಡು ಲಸಿಕೆ ನೀಡಲಾಯಿತು. ಈ ಲಸಿಕೆಗಳು ನಿರ್ದಿಷ್ಟ ಪ್ರಮಾಣದ ಪ್ರತಿಕಾಯಗಳನ್ನು ರೂಪಿಸಿವೆ’ ಎಂದು ಬ್ಯಾನ್ಸೆಲ್ ಹೇಳಿದರು.
ಇದನ್ನೂ ಓದಿ–ಆಫ್ರಿಕಾ: ಕೋವಿಡ್ ಪ್ರಕರಣಗಳು ಮತ್ತೆ ಹೆಚ್ಚಳ
ಲಸಿಕಾ ಪ್ರಯೋಗಕ್ಕೆ ಎರಡು ವರ್ಷದಿಂದ ಆರು ವರ್ಷದ 4,200 ಮಕ್ಕಳು, 2,500 ನವಜಾತ ಶಿಶುಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.